99 ಸಾವಿರ ರೂ. ಆನ್‌ಲೈನ್ ಮೂಲಕ ವರ್ಗಾವಣೆ (theft)
ಹುಬ್ಬಳ್ಳಿ: ಪ್ರಯಾಣಿಕರೊಬ್ಬರ ಮೊಬೈಲ್ ಫೋನ್ ಕಳವು (theft) ಮಾಡಿ ಅದರಲ್ಲಿನ ಆ್ಯಪ್ ಮೂಲಕ 99 ಸಾವಿರ ರೂ. ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡಿದ್ದರ ಕುರಿತು ಇಲ್ಲಿಯ ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸೂರು ಬಸ್ ನಿಲ್ದಾಣದಿಂದ ಮುರಾರ್ಜಿನಗರಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ ಪರಶುರಾಮ ಕಣ್ಣೂರ ಪ್ರಯಾಣಿಸುತ್ತಿದ್ದರು. ಆಗ ಒನ್ ಪ್ಲಸ್ ಮೊಬೈಲ್ ಫೋನ್ ಕಳವಾಗಿದೆ. ಆಗಂತಕರು ಎಸ್‌ಬಿಐ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.