ಹೋಟೆಲ್ ಉದ್ಯಮಿ ಮನೆಯಲ್ಲಿ theft ಕಳವು
ಹುಬ್ಬಳ್ಳಿ: ಇಲ್ಲಿಯ ನವೀನ ಪಾರ್ಕ್‌ನ ಶ್ರದ್ಧಾ ಅಪಾರ್ಟ್ಮೆಂಟ್ ಎದುರಿನ ಮನೆಯೊಂದರ ಬಾಗಿಲಿನ ಇಂಟರ್ ಲಾಕ್ ಮುರಿದು 7.50 ಲಕ್ಷ ರೂ. ನಗದು ಕಳವಾದ theft ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಹೋಟೆಲ್ ಉದ್ಯಮಿ ಬಾಲಕೃಷ್ಣ ಶೆಟ್ಟಿ ಎಂಬುವವರ ಮನೆಯಲ್ಲಿ ಕಳವಾಗಿದೆ. ಎರಡು ದಿನದ ಹಿಂದೆ ಮನೆಗೆ ಬೀಗ ಹಾಕಿ ಮಗಳ ಕಾಲೇಜ್ ದಾಖಲಾತಿಗಾಗಿ ಶೆಟ್ಟಿ ಕುಟುಂಬ ಬೆಂಗಳೂರಿಗೆ ತೆರಳಿದೆ. ಮನೆಯಲ್ಲಿ ಯಾರೂ ಇಲ್ಲದ ವಿಷಯ ತಿಳಿದು ಕಳೆದ ರಾತ್ರಿ ವೇಳೆ ಬಾಗಿಲಿನ ಇಂಟರ್ ಲಾಕ್ ಮುರಿದು ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ವಾರ್ಡ್ರೋಬ್‌ನಲ್ಲಿಟ್ಟಿದ್ದ 7.50 ಲಕ್ಷ ರೂ. ನಗದು ದೋಚಿದ್ದಾರೆ. ಜಯರಾಮ ಶೆಟ್ಟಿ ನೀಡಿದ ದೂರಿನ ಮೇರೆಗೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.