ವಿಶ್ವಕರ್ಮ ಜಯಂತಿ ನಿಮಿತ್ತ ಶಾಸಕ ವಿನಯ ಕುಲಕರ್ಣಿ ಭಗವಾನ್ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ನಮಿಸಿದರು. 
ಧಾರವಾಡ

ವಿಶ್ವಕರ್ಮ ಸಮುದಾಯದವರು ಶ್ರಮಿಕರು

ಧಾರವಾಡ: ವಿಶ್ವಕರ್ಮ ಸಮುದಾಯವು ಶ್ರಮಿಕ ಸಮುದಾಯವಾಗಿದ್ದು, ರೈತರೊಂದಿಗೆ ನೇರ ಸಂಬಂಧ ಹೊಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಕಾಯಕ ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಯುವಕರಿಗೆ ಕೌಶಲ ಮೂಡಿಸಲು ತರಬೇತಿ ಕೇಂದ್ರ ತೆರೆದರೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಶಾಸಕ ವಿನಯ ಕುಲಕಣಿರ್ ತಿಳಿಸಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ನಗರದ ಆಲೂರು ವೆಂಕಟರಾವ್​ ಸಾಂಸತಿಕ ಭವನದಲ್ಲಿ ಗುರುವಾರ ಆಯೋಜಿಸಿದ್ದ "ಭಗವಾನ್​ ವಿಶ್ವಕರ್ಮ ಜಯಂತ್ಯುತ್ಸವ'ದಲ್ಲಿ ಮಾತನಾಡಿದರು.
ನಮ್ಮ ಕೃಷಿ ಪ್ರಧಾನ ದೇಶದಲ್ಲಿ ರೈತರ ಹೊಲದ ಕುಂಟಿ, ಕೂರಿಗೆಯಂತಹ ಪ್ರಮುಖ ಕೃಷಿ ಪರಿಕರಗಳ ತಯಾರಿಕೆ ಮತ್ತು ದುರಸ್ತಿ ಕಾರ್ಯಗಳು ನಡೆಯಬೇಕಾದರೆ ವಿಶ್ವಕರ್ಮ ಸಮಾಜದ ಪಾತ್ರ ಅನನ್ಯವಾಗಿದೆ ಎಂದರು.
ವಿಶ್ವಕರ್ಮ ಸಮುದಾಯದ ಯುವಜನರು ಕೇವಲ ಕಂಪನಿಗಳ ಉದ್ಯೋಗಗಳಿಗೆ ಸೀಮಿತವಾಗದೆ, ಭಾರಿ ಬೇಡಿಕೆ ಇರುವ ಸ್ವಯಂ ಉದ್ಯೋಗದ ಕಡೆಗೂ ಗಮನ ಹರಿಸಬೇಕು. ಪ್ರಸ್ತುತ ಸ್ಥಳಿಯವಾಗಿ ನುರಿತ ಕೆಲಸಗಾರರು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಉದ್ಯೋಗ ತರಬೇತಿ ಕೇಂದ್ರಗಳನ್ನು ಆರಂಭಿಸುವುದು ಅತ್ಯಗತ್ಯ ಎಂದು ಹೇಳಿದರು.
ಯುವಕರಿಗೆ ಸರಿಯಾದ ಸಮಯದಲ್ಲಿ ಉದ್ಯೋಗ ಮತ್ತು ತರಬೇತಿ ಸಿಗದಿದ್ದರೆ ಅವರು ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಇದನ್ನು ತಡೆಗಟ್ಟಲು ಸಮಾಜದ ಮುಖಂಡರು ಮುತುವಜಿರ್ ವಹಿಸಬೇಕು. ಸಂಟನೆಯ ಪದಾಧಿಕಾರಿಗಳು ಕೇವಲ ಅಧಿಕಾರಕ್ಕೆ ಸೀಮಿತವಾಗದೆ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಕ ಆರ್​. ಪ್ರಮೋದಸ್ವಾಮಿ ಮಾತನಾಡಿ, ವಿಶ್ವಕರ್ಮ ಸಮುದಾಯದವರಲ್ಲಿ ಸ್ವಾಭಿಮಾನ ಹೆಚ್ಚಾಗಿದ್ದು, ಅದರಿಂದಲೇ ಅವರು ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಸ್ವಾಭಿಮಾನ ಬದಿಗಿಟ್ಟು ಅಧಿಕಾರಿಗಳನ್ನು ಮುಖಾಮುಖಿ ಭೇಟಿಯಾಗಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಕಾಳಪ್ಪ ಬಡಿಗೇರ, ಅರವಿಂದ ಏಗನಗೌಡರ, ನಿರಂಜನ ಬಡಿಗೇರ, ವಸಂತ ಅರ್ಕಾಚಾರಿ, ಮಹಾರುದ್ರ ಬಡಿಗೇರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಸಂತೋಷ ಬಡಿಗೇರ ಉಪಸ್ಥಿತರಿದ್ದರು.