soldiers ಹುಬ್ಬಳ್ಳಿಯ ಭಾವಾಜಿ ಮಠದ ಉದ್ಯಾನದಲ್ಲಿ ಏರ್ಪಡಿಸಿದ್ದ ಕಾರ್ಗಿಲ ವಿಜಯೋತ್ಸವ ಕಾರ್ಯಕ್ರಮವನ್ನು ಸ್ವರ್ಣ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ ಅವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.
- ಕಾಗ್ರಿಲ್ ವಿಜಯೋತ್ಸವದಲ್ಲಿ ಡಾ. ವಿ.ಎಸ್.ವಿ. ಪ್ರಸಾದ ಹೇಳಿಕೆ
- ಹೆಮ್ಮೆಯ ಯೋಧರಿಗೆ ಸೆಲ್ಯೂಟ್ ಹೇಳೋಣ.
- ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಮಹಾನ್ ವೀರರಿಗೆ ಗೌರವ ಸಲ್ಲಿಸೋಣ
ಹುಬ್ಬಳ್ಳಿ :
ಭಾವಾಜಿ ಮಠದ ಉದ್ಯಾನದಲಿ ್ಲಗತ ಸಿಂಗ್ ಸೇವಾ ಸಂಘದವರು ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಸಸಿನೆಡುವ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.
ದೇಶದ ಸೇನಾ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುವ ಗೆಲುವು ತಂದು ಕೊಟ್ಟ ನಮ್ಮ ಹೆಮ್ಮೆಯ ಯೋಧರಿಗೆ ಸೆಲ್ಯೂಟ್ ಹೇಳೋಣ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಮಹಾನ್ ವೀರರಿಗೆ ಗೌರವ ಸಲ್ಲಿಸೋಣ ಎಂದರು.
ದೇಶಕ್ಕಾಗಿ, ಇಡೀ ಸಮಾಜದ ಒಳಿತಿಗಾಗಿ ದುಡಿದ, ತ್ಯಾಗ ಮಾಡಿದ ಮಹನೀಯರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಸತ್ಸಂಪ್ರದಾಯ.
ಅಂಥ ಒಂದು ಶ್ಲಾಘನೀಯ ಕಾರ್ಯವನ್ನು ಭಗತಸಿಂಗ್ ಸಂಸ್ಥೆ ಮಾಡುತ್ತಿದೆ. ಪ್ರತೀ ವರ್ಷವೂ ಕಾರ್ಗಿಲ್ ವಿಜಯೋತ್ಸವ ಆಚರಿಸುವ ಮೂಲಕ ಯುವ ಪೀಳಿಗೆಗೆ ಇತಿಹಾಸ ಪರಿಚಯಿಸುವ ಮತ್ತು ದೇಶ ರಕ್ಷಣೆಯ ವಿಷಯದಲ್ಲಿನ ಅಡ್ಡಿಆತಂಕಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತಿದೆ ಎಂದು ಭಗತ್ಸಿಂಗ ಸೇವಾಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ನಿವೃತ್ತ ಸೈನಿಕರಾದ ಸುಬೇದಾರ ರಾಮಸಿದ್ದಪ್ಪ ಜಾಯಿ, ಸುಬೇದಾರ ಬಾಬು ಅರವಳ್ಳಿ, ಲೆಫ್ಟನೆಂಟ್ ಕೆ.ಸಿ. ಹಿರೇಮಠ, ಹವಾಲ್ದಾರ ಅನೀಲ ಕುಮಾರ ಪಿ.ಎಂ., ಸಂತೋಷ ರಾಥೋಢ ಅವರನ್ನು ಸನ್ಮಾನಿಸಲಾಯಿತು.
ಭಗತ್ಸಿಂಗ್ ಸೇವಾ ಸಂಸ್ಥೆಯ ವಿಶಾಲ ಜಾಧವ, ಸುನೀಲ ಬೂದುರ, ರಾಹುಲ ವ್ವಾಗ್ಮರೆ , ಪ್ರೇಮಸಿಂಗ್ ರಾಠೋಡ ಉಪಸ್ಥಿತರಿದ್ದರು.