ಮಂಜುನಾಥ ಎಸ್. ಅಂಗಡಿ ಧಾರವಾಡ
ಜಿಲ್ಲೆಯಾದ್ಯಂತ ಮುಂಗಾರು ಹಂಗಾಮು ಚುರುಕುಗೊಂಡಿದೆ. ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ರೈತರು ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದು, ರೋಹಿಣಿ ಮಳೆ ಇನ್ನಷ್ಟು ಬಿರುಸಾಗಲಿ ಎಂದು ರೈತರು ಆಶಿಸುತ್ತಿದ್ದಾರೆ.
ಈ ಬಾರಿ ಮುಂಗಾರು ಪೂರ್ವ ಮಳೆ ಏಪ್ರಿಲ್, ಮೇನಲ್ಲಿ ಆಗಾಗ ಸುರಿದಿದೆ. ಹೀಗಾಗಿ ಜಮೀನು ಹದ ಮಾಡಿಕೊಂಡಿದ್ದ ರೈತರು ಮೇ ಕೊನೇ ವಾರದಿಂದ ಬಿತ್ತನೆ ಕಾರ್ಯ ಕೈಗೊಳ್ಳುತ್ತಿದ್ದಾರೆ. ಜೂ. 4ರಂದು ನೈಋತ್ಯ ಮಾನ್ಸೂನ್ (ಮುಂಗಾರು) ಕೇರಳಂಗೆ ಪ್ರವೇಶಿಸಿದೆ. ಕರ್ನಾಟಕದ ಕರಾವಳಿ ಭಾಗಕ್ಕೆ ವ್ಯಾಪಿಸಿದೆ. ಜಿಲ್ಲೆಯ ವಿವಿಧೆಡೆ ಮಳೆಯಾಗಿದ್ದರೂ ಮುಂಗಾರು ಮಳೆಯ ವಾತಾವರಣ ಇನ್ನೂ ಕಾಣಿಸಿಲ್ಲ.
ಭೂಮಿಯಲ್ಲಿ ಅರೆಬರೆ ತೇವಾಂಶವಿದ್ದರೂ ರೈತರು ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಜೂ. 8ರಿಂದ ಮೃಗಶಿರ ಮಳೆ ಆರಂಭವಾಗಿದ್ದು, ಹದಭರಿತವಾಗಿ ಸುರಿಯಲಿದೆ ಎಂದು ರೈತರು ನಿರೀಕ್ಷಿಸಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರು ಮುಖ್ಯವಾಗಿ ಆಹಾರ ಧಾನ್ಯಗಳಾದ ಭತ್ತ, ಜೋಳ, ಮುಸುಕಿನ ಜೋಳ, ಊದಲು, ಕೊರಲೆ, ನವಣೆ, ಬರಗು, ಸಾವೆ, ಹಾರಕ ಹಾಗೂ ದ್ವಿದಳ ಧಾನ್ಯಗಳಾದ ತೊಗರಿ, ಹುರಳಿ, ಉದ್ದು, ಹೆಸರು, ಅಲಸಂದಿ, ಅವರೆ ಹಾಗೂ ಶೇಂಗಾ, ಸೊಯಾಅವರೆ, ಹತ್ತಿ ಮತ್ತು ಕಬ್ಬು ಬೆಳೆಗಳನ್ನು ಬೆಳೆಯುತ್ತಾರೆ. ಅಳ್ನಾವರ ತಾಲೂಕಿನಲ್ಲಿ 5,654 ಹೆಕ್ಟೇರ್, ಧಾರವಾಡ ತಾಲೂಕಿನಲ್ಲಿ 57,855 ಹೆಕ್ಟೇರ್, ಕಲಟಗಿ ತಾಲೂಕಿನಲ್ಲಿ 37,817 ಹೆಕ್ಟೇರ್, ಹುಬ್ಬಳ್ಳಿ ತಾಲೂಕಿನಲ್ಲಿ 37,594 ಹೆಕ್ಟೇರ್, ಹುಬ್ಬಳ್ಳಿ ಶಹರ ತಾಲೂಕಿನಲ್ಲಿ 6,810 ಹೆಕ್ಟೇರ್, ಕುಂದಗೋಳ ತಾಲೂಕಿನಲ್ಲಿ 52,150 ಹೆಕ್ಟೇರ್, ನವಲಗುಂದ ತಾಲೂಕಿನಲ್ಲಿ 58,843 ಹೆಕ್ಟೇರ್ ಮತ್ತು ಅಣ್ಣಿಗೇರಿ ತಾಲೂಕಿನಲ್ಲಿ 26,554 ಹೆಕ್ಟೇರ್ ಭೂಪ್ರದೇಶ ಸೇರಿ ಜಿಲ್ಲೆಯಾದ್ಯಂತ 2,82,677 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ (ಸೆಪ್ಟೆಂಬರ್ವರೆಗೆ) ಯೂರಿಯಾ ರಸಗೊಬ್ಬರ 27,642 ಟನ್ ಬೇಡಿಕೆ ಅಂದಾಜಿಸಲಾಗಿದೆ. ಹಿಂದಿನ ಉಳಿಕೆ ಹಾಗೂ ಪ್ರಸಕ್ತ ವರ್ಷದ ಪೂರೈಕೆ ಸೇರಿ ಗೊದಾಮುಗಳು ಮತ್ತು ಮಾರಾಟ ಕೇಂದ್ರಗಳಲ್ಲಿ ಅಗತ್ಯ ದಾಸ್ತಾನು ಲಭ್ಯವಿದೆ. ಉಳಿದಂತೆ ಡಿಎಪಿ ರಸಗೊಬ್ಬರ 4,526.72, ಪೊಟ್ಯಾಶ್ ರಸಗೊಬ್ಬರ 2,562.16, ಕಾಂಪ್ಲೆಕ್ಸ್ ರಸಗೊಬ್ಬರ 11,299.31, ಎಸ್.ಎಸ್.ಪಿ ರಸಗೊಬ್ಬರ 453.95 ಟನ್ ದಾಸ್ತಾನು ಇದೆ.
* ವಿಚಕ್ಷಣ ದಳಗಳ ಕಾರ್ಯಾಚರಣೆ
ರೈತರಿಗೆ ಸಕಾಲಕ್ಕೆ ಬೀಜ, ರಸಗೊಬ್ಬರ ತಲುಪುವಂತೆ ಕೃಷಿ ಇಲಾಖೆ ಅ-ಧಿಕಾರಿಗಳು ಕ್ರಮ ವಹಿಸಿದ್ದಾರೆ. ಕಾನೂನು ಮೀರಿ ಹೆಚ್ಚಿನ ದರಕ್ಕೆ ಮಾರಾಟ, ಅನ-ಧಿಕೃತ ದಾಸ್ತಾನು, ಕೃತಕ ಅಭಾವ ಸೃಷ್ಟಿಸುವ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಚಣ ದಳಗಳನ್ನು ರಚಿಸಲಾಗಿದೆ. ಅಧಿ-ಕಾರಿಗಳು ಮಾರಾಟ ಕೇಂದ್ರಗಳಿಗೆ ನಿರಂತರ ಭೇಟಿ ನೀಡಿ ಗುಣಮಟ್ಟದ ಮತ್ತು ಇಲಾಖೆ ಶಿಾರಸು ಮಾಡಿರುವ ಬೀಜ, ರಸಗೊಬ್ಬರ ರೈತರಿಗೆ ಲಭಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳುತ್ತಿದ್ದಾರೆ. ರೈತರಿಗೆ ಯಾವುದೇ ಲಿಂಕ್ ಗೊಬ್ಬರ ನೀಡುವುದು, ಹೆಚ್ಚಿನ ದರಕ್ಕೆ ಮಾರಾಟ, ರಶೀದಿ ನೀಡದಿರುವುದು, ದಾಸ್ತಾನು ವಿವರ ಮತ್ತು ದರಗಳ ಸೂಚನಾ ಲಕ ಅಳವಡಿಸದಿದ್ದರೆ ಮತ್ತು ಸಾರ್ವಜನಿಕರಿಂದ ದೂರು ಬಂದರೆ ಅಂಥ ಅಂಗಡಿಗಳ ಮಾರಾಟ ಪರವಾನಗಿ ಅಮಾನತು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
"
ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಚಟುವಟಿಕೆ ಆರಂಭಗೊಂಡಿದೆ. ನಿರೀತ ಬಿತ್ತನೆ ಪ್ರದೇಶಕ್ಕೆ ಅನುಗುಣವಾಗಿ ಇಲಾಖೆಯಿಂದ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಜಿಲ್ಲೆಗೆ ಅಗತ್ಯ ರಸಗೊಬ್ಬರ ಪೂರೈಕೆಯಾಗುತ್ತಿದೆ. ರಸಗೊಬ್ಬರ ಪರವಾನಗಿ ಇರುವ ಪಿಒಎಸ್ ಮಾರಾಟ ಕೇಂದ್ರಗಳಲ್ಲಿ ಕೆ- ಕಿಸಾನ್ ತಂತ್ರಾಂಶದಲ್ಲಿ ವಿವರ ದಾಖಲಿಸಿ ವಿತರಿಸಲಾಗುತ್ತಿದೆ. ಅದೇರೀತಿ 14 ರೈತ ಸಂಪರ್ಕ ಕೇಂದ್ರಗಳು ಮತ್ತು 17 ಹೆಚ್ಚುವರಿ ಕೇಂದ್ರಗಳಲ್ಲಿ ಕೃಷಿ ಅಧಿ-ಕಾರಿ& ಸಿಬ್ಬಂದಿ ಬಿತ್ತನೆ ಬೀಜ ವಿತರಿಸುತ್ತಿದ್ದಾರೆ. ಬಿತ್ತನೆ ಬೀಜ ಖರೀದಿ, ಇತರ ಸೌಲಭ್ಯ ಪಡೆಯಲು ರೈತರು ಪ್ರೂಟ್ ಐಡಿ ಸಂಖ್ಯೆ ಹೊಂದುವುದು ಕಡ್ಡಾಯ.
— ಮಂಜುನಾಥ ಅಂತರವಳ್ಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರು