ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ಸಂತೋಷ್ ಹಾನಗಲ್ಲ ಅವರು ರಚಿಸಿದ "ದಿ ಲ್ಯಾಂಪ್​ ಬೆರರ್ಸ್​' ಗ್ರಂಥ ಬಿಡುಗಡೆ ಮಾಡಲಾಯಿತು. 
ಧಾರವಾಡ

ದಿ ಲ್ಯಾಂಪ್​ ಬೆರರ್ಸ್​' ಅಮೋಘ ಕೃತಿ

ಮಂಜುನಾಥ ಅಂಗಡಿ
ಧಾರವಾಡ: ಡಾ. ಸಂತೋಷ್ ಹಾನಗಲ್​ ಅವರ "ದಿ ಲ್ಯಾಂಪ್​ ಬೆರರ್ಸ್​' ಭಾಲ್ಕಿ ಹಿರೇಮಠ ಗಡಿಭಾಗದಲ್ಲಿ ಕನ್ನಡ ಭಾಷೆ, ಪರಂಪರೆ, ಸಂಸತಿಯನ್ನು ಉಳಿಸಿ, ಬೆಳೆಸಿಕೊಂಡು ಬಂದ ಇತಿಹಾಸ ಬಿಂಬಿಸುವ ಅಮೋಘ ಕೃತಿಯಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಡಾ. ಎ.ಎಂ. ಖಾನ್​ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ಭಾಲ್ಕಿ- ಬೀದರ ಹಿರೇಮಠ ಸಂಸ್ಥಾನ ವಿದ್ಯಾಪಿಠ ಟ್ರಸ್ಟ್​ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಡಾ. ಸಂತೋಷ್ ಹಾನಗಲ್ಲ ಅವರು ರಚಿಸಿದ "ದಿ ಲ್ಯಾಂಪ್​ ಬೆರರ್ಸ್​' ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಭವ್ಯ ಪರಂಪರೆ ಹಾಗೂ ಇತಿಹಾಸವನ್ನು ಲೇಖಕ ಡಾ. ಮನೋಜ ಹಾನಗಲ್ಲ ಆಂಗ್ಲ ಭಾಷೆಯಲ್ಲಿ ಅತ್ಯಂತ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಬರೆದಿದ್ದಾರೆ. ಕನ್ನಡಕ್ಕೆ ಅನುವಾದವಾದಲ್ಲಿ ಇನ್ನೂ ಹೆಚ್ಚೆಚ್ಚು ಭಾಲ್ಕಿ ಹಿರೇಮಠ ಸಂಸ್ಥಾನ ಹಾಗೂ ಪೂಜ್ಯರಿಬ್ಬರು ಸಮಾಜ ಸೇವೆಗಾಗಿ ಮಾಡಿದ ಕಾರ್ಯಗಳನ್ನು ಅರಿಯಲು ಅನುಕೂಲವಾಗುತ್ತದೆ ಎಂದರು.
ಶೇಗುಣಸಿಯ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮೀಜಿ ಗ್ರಂಥ ಪರಿಚಯಿಸಿದರು.
ರುದ್ರಾಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದೇವರು, ಕತಿಕಾರ ಡಾ. ಸಂತೋಷ್ ಹಾನಗಲ್ಲ ಮಾತನಾಡಿದರು. ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬಸವಕಲ್ಯಾಣ ಅನುಭವ ಮಂಟಪದ ಅಧ್ಯ ಡಾ. ಬಸವಲಿಂಗ ಪಟ್ಟದೇವರು, ಡಾ. ಮನೋಜ ಬುಟ್ಟೆ, ವೀರಣ್ಣ ಒಡ್ಡೀನ, ಸತೀಶ ತುರಮರಿ, ಶಂಕರ ಕುಂಬಿ, ಡಾ. ಮಹೇಶ ಹೊರಕೇರಿ, ಗುರು ಹಿರೇಮಠ ಡಾ. ಧನವಂತ ಹಾಜವಗೋಳ, ಶಶಿಧರ ತೋಡಕರ, ಇತರರಿದ್ದರು.