ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಮಹಾರಾಷ್ಟçದ ಸೋಲ್ಲಾಪುರ ಜಿಲ್ಲೆಯ ಕನ್ನಡ ಸಂಘಗಳ ಸಹಯೋಗದಲ್ಲಿ ಜೂ. 20, 21ರಂದು ಸೋಲ್ಲಾಪುರದ ಹುತಾತ್ಮ ಸ್ಮÈತಿ ಮಂದಿರದಲ್ಲಿ ಅಖಿಲ ಭಾರತ ಹೊರನಾಡು ಕನ್ನಡ ಸಂಘಗಳ ಪ್ರತಿನಿಧಿಗಳ 10ನೇ ಮಹಾಮೇಳ ಆಯೋಜಿಸಲಾಗಿದೆ ಎಂದು ಕ.ವಿ.ವ. ಕಾರ್ಯಧ್ಯಕ್ಷ ಬಸವಪ್ರಭು ಹೊಸಕೇರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೂ. 20ರಂದು ಬೆಳಗ್ಗೆ 10ಕ್ಕೆ ಮಾಜಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಸೋಲ್ಲಾಪುರ ಕಿರೀಟೇಶ್ವರ ಮಠದ ಸ್ವಾಮಿನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಹಾರಾಷ್ಟçದ ಅಕ್ಕಲಕೋಟ ಶಾಸಕ ಸಚಿನ ಕಲ್ಯಾಣಶೆಟ್ಟಿ ಗ್ರಂಥ ಬಿಡುಗಡೆ ಮಾಡುವರು. ಸೋಲ್ಲಾಪೂರ ಪೊಲೀಸ್ ವರಿಷ್ಠಾಽಕಾರಿ ಅತುಲ್ ಕುಲಕರ್ಣಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾAತ ಬೆಲ್ಲದ ಅಧ್ಯಕ್ಷತೆ ವಹಿಸುವರು ಎಂದರು.
ಸಂಜೆ 5.30ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ ಪಾಟೀಲ ಉದ್ಘಾಟಿಸುವರು. ಸೋಲ್ಲಾಪೂರ ಉತ್ತರ ಶಾಸಕ ವಿಜಯಕುಮಾರ ದೇಶಮುಖ ಅಧ್ಯಕ್ಷತೆ ವಹಿಸುವರು. ಇದೆ ವೇಳೆ ಶಾಂತವೀರ ಬಸವಂತಿ, ಬಸವರಾಜ ಮಸೂತಿ, ಮಹಾದೇವ ಕೋಗನೂರೆ, ಶ್ರೀಶೈಲ ಮಾಳಗೆ, ಬಸವರಾಜ ಗುರವ ಹಾಗೂ ರಾಜಶೇಖರ ಉಂಬರಾಣಿಕರ ಅವರಿಗೆ ಸನ್ಮಾನಿಸಲಾಗುವುದು. ನಂತರ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಹೇಳಿದರು.
ಜೂ. 21ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಎರಡು ಗೋಷ್ಠಿಗಳು ನಡೆಯಲಿವೆ. ಜತೆಗೆ ಮಧ್ಯಾಹ್ನ 3ಕ್ಕೆ ಕವಿ ಮಿಲನ ಕಾರ್ಯಕ್ರಮ ಜರುಗಲಿದೆ. ಸಂಜೆ 4.30ಕ್ಕೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಕಾಶಿ ಪೀಠದ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು.
ಆಳಂದ ಶಾಸಕ ಬಿ.ಆರ್. ಪಾಟೀಲ ಸಮಾರೋಪ ಭಾಷಣಗಳನ್ನಾಡುವರು. ಸೋಲ್ಲಾಪುರದ ಮಾಜಿ ಶಾಸಕ ವಿಶ್ವನಾಥ ಬಾಬುರಾವ ಚಾಕೋತೆ ಅತಿಥಿಗಳಾಗಿ ಪಾಲ್ಗೊಳ್ಳುವರು. ಎನ್.ಎ. ವಾಲೆ, ಪರಮಾನಂದ ಅಲಗೊಂಡ ಪಾಟೀಲ, ಗೈಬಿಶಾ ಮಕಾನ್ಹಾರ, ಡಿ.ಬಿ. ಹೆಬ್ಬಾಳ್, ಕೆ.ಎನ್. ಹೂಗಾರ, ಅಕ್ಟರ್ ಮುಲ್ಲಾ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸಂಜೆ 6.15ಕ್ಕೆ ನಡೆಯುವ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ವಿವಿಧ ಕಲಾತಂಡಗಳು ಹಾಗೂ ಕಲಾವಿದರಿಂದ ಕನ್ನಡ ಭಕ್ತಿ ಗೀತೆಗಳು, ವಚನ ನೃತ್ಯ, ನಾಟಕ, ಕೋಲಾಟ, ಯೋಗ ನೃತ್ಯ ಹಾಗೂ ವೀರಗಾಸೆ ನಡೆಯಲಿವೆ ಎಂದು ವಿವರಿಸಿದರು.
ಶಂಕರ ಹಲಗತ್ತಿ, ಸಂಜೀವ ಕುಲಕರ್ಣಿ, ಶಂಕರ ಕುಂಬಿ, ವೀರಣ್ಣ ಒಡ್ಡಿನ, ವಿಶ್ವೇಶ್ವರಿ ಹಿರೇಮಠ, ಸತೀಶ ತುರುಮುರಿ ಸುದ್ದಿಗೋಷ್ಠಿಯಲ್ಲಿದ್ದರು.