teppotsav ಹುಬ್ಬಳ್ಳಿಯ ಆರಾಧ್ಯ ದೈವ ಶ್ರೀ ಸಿದ್ಧಾರೂಢರ 97ನೇ ಪುಣ್ಯಾರಾಧನೆ ಅಂಗವಾಗಿ ಶನಿವಾರ ಭಕ್ತಸಾಗರದ ಮಧ್ಯೆ ಜಲರಥೋತ್ಸವ ವೈಭವದಿಂದ ನಡೆಯಿತು. 
ಧಾರವಾಡ

teppotsav ಶ್ರೀಸಿದ್ಧಾರೂಢರ ವೈಭವದ ಜಲರಥೋತ್ಸವ

ಪ್ರಮುಖ ಮುಖ್ಯಾಂಶಗಳು

  • ಶ್ರಾವಣ ಸಂಭ್ರಮದಲ್ಲಿ ಮಿಂದೆದ್ದ ಭಕ್ತಸಾಗರ
  • ಉಭಯ ಶ್ರೀಗಳ ಗದ್ದುಗೆ, ಕೈಲಾಸ ಮಂಟಪ ದರ್ಶನ

ಹುಬ್ಬಳ್ಳಿ: teppotsav

ಹುಬ್ಬಳ್ಳಿಯ ಆರಾಧ್ಯ ದೈವ, ಲೋಕೋದ್ಧಾರಕ ಸದ್ಗುರು ಶ್ರೀ ಸಿದ್ಧಾರೂಢರ 97ನೇ ಪುಣ್ಯಾರಾಧನೆ ಅಂಗವಾಗಿ ಶನಿವಾರ ಶ್ರೀಮಠದ ಎದುರಿನ ಕೆರೆಯಲ್ಲಿ (ಪುಷ್ಕರಣಿ) ಜರುಗಿದ ಜಲರಥೋತ್ಸವವನ್ನು ಅಸಂಖ್ಯ ಭಕ್ತರು ಕಣ್ತುಂಬಿಕೊಂಡರು.

ಜಿನುಗುವ ಮಳೆಯಲ್ಲಿಯೇ ಸಂಜೆ 5,30ಕ್ಕೆ ಆರಂಭವಾದ ತೆಪ್ಪೋತ್ಸವ ವೀಕ್ಷಣೆಗೆ ಹುಬ್ಬಳ್ಳಿ- ಧಾರವಾಡ ಮಾತ್ರವಲ್ಲ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಶ್ರೀ ಸಿದ್ಧಾರೂಢ ಮಹಾರಾಜ ಕೀ ಜೈ, ಶ್ರೀ ಗುರುನಾಥರೂಢ ಮಹಾರಾಜ ಕೀ ಜೈ, ಸಿದ್ಧಾರೂಢ ಸದ್ಗುರು ತಂದೆ ಉದ್ಧಾರಾದೇವು ನಿನ್ನಿಂದ... ಮುಂತಾದ ಭಕ್ತಿ ಭಾವದ ಹಾಡುಗಳೊಂದಿಗೆ ಐದು ಸುತ್ತು ಪುಷ್ಕರಣಿ ಸುತ್ತಿದ ನಂತರ ಜಲರಥೋತ್ಸವ ಸಮಾರೋಪಗೊಂಡಿತು.

ಜಲರಥೋತ್ಸವ ವಿಶೇಷ

ಶನಿವಾರ ಶ್ರೀಗಳ ಪಲ್ಲಕ್ಕಿ ಉತ್ಸವ ವಿವಿಧ ವಾದ್ಯಮೇಳಗಳೊಂದಿಗೆ ನಗರದಲ್ಲಿ ಸಂಚರಿಸಿ ಸಂಜೆ 5.30ಕ್ಕೆ ಶ್ರೀಮಠದ ಪುಷ್ಕರಣಿಗೆ ಆಗಮಿಸಿತು. ಬಿದಿರಿನಿಂದ ತಯಾರಿಸಲಾದ ತೆಪ್ಪದಲ್ಲಿ ಶ್ರೀಸಿದ್ಧಾರೂಢರು ಹಾಗೂ ಗುರುನಾಥರೂಢರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹೂವು, ಪತ್ರಿ, ಬಾಳೆ ಕಂಬಗಳಿಂದ ಅಲಂಕರಿಸಿ ಜಲರಥೋತ್ಸವ ನೆರವೇರಿಸಲಾಯಿತು.
ನ್ಯಾಯಾಧೀಶರಾದ ಗೀತಾ ಕೆ.ಬಿ., ನ್ಯಾ. ರಾಜೇಶ್ವರಿ ಹೆಗಡೆ, ನ್ಯಾ. ಕೆ.ಜಿ. ಶಾಂತಿ, ನ್ಯಾ. ಹೇಮಾ ಕುಲಕರ್ಣಿ ಹಾಗೂ ಸಿದ್ಧಾರೂಢ ಮಠ ಟ್ರಸ್ಟ್​ ಕಮಿಟಿ ಚೇರ್ಮನ್​ ಬಾಳು ಮಗಜಿಕೊಂಡಿ ಹಾಗೂ ಟ್ರಸ್ಟಿಗಳು, ವಿವಿಧ ಸ್ವಾಮೀಜಿಗಳ ಸಮ್ಮುಖದಲ್ಲಿ ರಥಕ್ಕೆ ಪೂಜೆ ಸಲ್ಲಿಸಿ ಜಲರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಅನೇಕ ಭಕ್ತರು ಪಾದಯಾತ್ರೆ ಮೂಲಕ ತಂಡೋಪ ತಂಡವಾಗಿ ಶ್ರೀಮಠಕ್ಕೆ ಆಗಮಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಉಭಯ ಶ್ರೀಗಳ ಗದ್ದುಗೆ, ಕೈಲಾಸ ಮಂಟಪ ದರ್ಶನ ಪಡೆದರು.

ಆಟೋ ಚಾಲಕರು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಮಠದ ಆವರಣದಲ್ಲಿ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ ಮಾಡಿದರು.

ಧರ್ಮದರ್ಶಿ