temple cleaning ಹುಬ್ಬಳ್ಳಿಯ ಪುರಾತನ ಭವಾನಿ ಶಂಕರ ದೇವಸ್ಥಾನದಲ್ಲಿ ಭಾನುವಾರ ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುತ್ತು ಹೆಬ್ಬಳ್ಳಿ, ಕೃಷ್ಣ ಗಂಡಗಾಳೇಕರ, ಪ್ರವಿಣ ಪವಾರ, ರಾಮನಗೌಡ ಶೆಟ್ಟನಗೌಡ್ರ, ಇತರರು ಇದ್ದರು.
ಹುಬ್ಬಳ್ಳಿ: temple cleaning ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 55ರಲ್ಲಿನ ಹಳೇಹುಬ್ಬಳ್ಳಿ ಪುರಾತನ ದೇವಸ್ಥಾನ ಭವಾನಿ ಶಂಕರ ಮಠದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮುತ್ತು ಹೆಬ್ಬಳ್ಳಿ ಇವರ ಮುಂದಾಳತ್ವದಲ್ಲಿ ಕ್ಷೇತ್ರದಲ್ಲಿ ಪ್ರತಿ ತಿಂಗಳ ಒಂದನೇ ಭಾನುವಾರ ಹಾಗೂ ತಿಂಗಳ ಮೂರನೇ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ನಮ್ಮ ನಡೆ ಹುಬ್ಬಳ್ಳಿ ಸ್ವಚ್ಛತೆ ಕಡೆಗೆ ಎಂಬ ಘೋಷಣೆ ಎಲ್ಲೆಡೆ ಸಾರಲಾಗುತ್ತಿದೆ ಎಂದು ಹೇಳಿದರು.