tebal tennis ಹುಬ್ಬಳ್ಳಿಯ ಐಬಿಎಂಆರ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಕವಿವಿ ಅಂತರವಲಯ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ನೀಡಲಾಯಿತು. ಡಾ. ರೇಖಾ ಮಹೇಂದ್ರಕರ್, ಡಾ. ಇಗ್ನೇಶ್ ಸಕ್ರಿ, ಡಾ. ಅರುಣ ಶೆಟ್ಟಿ, ಡಾ. ಮಹೇಶ್ವರಿ ಉದಗಟ್ಟಿ, ಪ್ರೊ. ಅಣ್ಣಪ್ಪ ಕೊರವರ, ಇತರರು ಇದ್ದರು.
- ಅಂತರ ವಲಯ ಟೇಬಲ್ ಟೆನ್ನಿಸ್ ಪಂದ್ಯ
- ಕರ್ನಾಟಕ ವಿಶ್ವವಿದ್ಯಾಲಯದ ಸಹಯೋಗ
ಪುರುಷರ ವಿಭಾಗದಲ್ಲಿ ಐಬಿಎಂಆರ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಚಾಂಪಿಯನ್ ಪಟ್ಟ ಅಲಂಕರಿಸಿದರು. ಮಹಿಳಾ ವಿಭಾಗದಲ್ಲಿ ನೆಹರು ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಚಾಂಪಿಯನ್ ಆದರು.
ಡಾ. ರೇಖಾ ಮಹೇಂದ್ರಕರ್, ಡಾ. ಅರುಣ ಶೆಟ್ಟಿ, ಡಾ. ಶಂಕರ ಚಕ್ರವರ್ತಿ, ಪ್ರೊ. ಯೂನಸ್ ಅಲಿಬಾಯ್, ಡಾ. ವಿಕ್ರಂ ಕುಲಕರ್ಣಿ, ಪ್ರೊ. ರವಿ ಕಬ್ಬಿಣದ, ಪ್ರೊ. ಸಮೀರ್ ಗುಡಿ, ದೈಹಿಕ ಶಿಕ್ಷಣ ಶಿಕ್ಷಕರಾದ ಭೀಮೇಶ ಹಾಗೂ ಲಕ್ಕಪ್ಪ ಉಪಸ್ಥಿತರಿದ್ದರು.