teachers day ಐಎಂಎ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ಪಡೆದ ಡಾ.ಎಸ್.ವೈ. ಮುಲ್ಕಿಪಾಟೀಲ ಅವರನ್ನು ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.
ಹುಬ್ಬಳ್ಳಿ: ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಶಾಖೆಯಿಂದ teachers day ಇಲ್ಲಿಯ ಕರ್ನಾಟಕ ವೈದ್ಯಕೀಯ ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ಶಿಕ್ಷಕರ ದಿನವನ್ನು ಆಚರಿಸಲಾಯಿತು.
ಕರ್ನಾಟಕ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಡಾ.ವೈ.ಸಿ. ಯೋಗಾನಂದ ರೆಡ್ಡಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ದಾರಿ ದೀಪ ತೋರುವವರು. ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ಸಿಕ್ಕರೆ, ದೇಶವು ಉಜ್ವಲವಾಗಲಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯತತ್ಪರರಾಗಬೇಕು ಎಂದು ಸಲಹೆ ನೀಡಿದರು.
ಜೆಜಿಎಂಎಂ ಮೆಡಿಕಲ್ ಕಾಲೇಜ್ ಪ್ರಾಚಾರ್ಯ ಡಾ. ಬಾಬಾಜಿ ೇವಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಭಾರತವು ಯುವ ಶಕ್ತಿಯ ಮೇಲೆ ನಿಂತಿದೆ. ಇಂಥ ಶಕ್ತಿಗೆ ಅತ್ಯುತ್ತಮ ಮಾರ್ಗವನ್ನು ಶಿಕ್ಷಕರು ತೋರಬೇಕು ಎಂದರು.
ಕೆಎಂಸಿಆರ್‌ಐ ನಿರ್ದೇಶಕ ಡಾ. ಉದಯ ಬಾಂದೆ ಅಧ್ಯಕ್ಷತೆ ವಹಿಸಿದ್ದರು.
ವೈದ್ಯರಾದ ಡಾ.ಎಸ್.ವೈ. ಮುಲ್ಕಿಪಾಟೀಲ, ಡಾ. ಅಬ್ದುಲ್ ಹಾದಿಶರೀಫ್, ಡಾ. ಅರವಿಂದ ಕರಿನಾಗಣ್ಣನವರ, ಡಾ.ಜಿ.ವಿ. ಬಸವರಾಜ, ಡಾ. ಬಸವರಾಜ ಪಾಟೀಲ, ಡಾ. ಮಲ್ಲಿಕಾರ್ಜುನ ಕೊಪ್ಪದ, ಡಾ. ಮಂಜುನಾಥ ಎಸ್.ಎನ್., ಡಾ. ಮೃತ್ಯುಂಜಯ ಬೆಲ್ಲದ, ಡಾ. ನಳಿನಿ ಎ.ಆರ್., ಡಾ. ರೇಖಾ ಎಂ.ಸಿ., ಡಾ. ಶ್ರೀನಾಥ ಸಿ.ಜಿ., ಡಾ. ಉಮಾ ದೇಶಮುಖ, ಡಾ. ವಿಜೇಥಾ ಶೆಣೈ ಬೆಳ್ಳೆ, ಡಾ. ವಿನೋದಕುಮಾರ ಎ.ಸಿ. ಅವರಿಗೆ ಐಎಂಎ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಐಎಂಎ ರಾಜ್ಯಾಧ್ಯಕ್ಷ ಡಾ. ವೀರಭದ್ರಯ್ಯ ಟಿ.ಎ., ಡಾ. ರಮೇಶ ಬಾಬು, ಕೆಎಂಸಿಆರ್‌ಐ ಪ್ರಾಚಾರ್ಯ ಡಾ. ಸೂರ್ಯಕಾಂತ ಕಲ್ಲೂರಾಯ, ಡಾ. ಬಸವರಾಜ ಸಜ್ಜನ, ಇತರರು ಭಾಗವಹಿಸಿದ್ದರು.