mlc world record ಹುಬ್ಬಳ್ಳಿ ನೆಹರು ಮೈದಾನದಲ್ಲಿ ಬಸವರಾಜ ಹೊರಟ್ಟಿ ಅಭಿನಂದನಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಗೌರವ ಸನ್ಮಾನ ನೀಡಲಾಯಿತು. ಸಿಎಂ ಸಿದ್ದರಾಮಯ್ಯ, ಸಭಾಧ್ಯಕ್ಷ ಯು.ಟಿ. ಖಾದರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದರಾದ ಜಗದೀಶ ಶೆಟ್ಟರ್​, ಬಸವರಾಜ ಬೊಮ್ಮಾಯಿ, ಶಾಸಕರು, ಶಂಕರಣ್ಣ ಮುನವಳ್ಳಿ, ರಾಜಣ್ಣ ಕೊರವಿ ಇತರರು ಇದ್ದರು. 
ಧಾರವಾಡ

mlc world record ದಾಖಲೆ ವೀರನಿಗೆ ಹೃದಯಸ್ಪರ್ಶಿ ಸನ್ಮಾನ

ಪ್ರಮುಖ ಮುಖ್ಯಾಂಶಗಳು

  • ಸಭಾಪತಿ ಬಸವರಾಜ ಹೊರಟ್ಟಿ ಅಭಿನಂದನಾ ಸಮಾರಂಭ
  • ಸೇವಾ ಕ್ಷೇತ್ರದಲ್ಲಿ ಜಾತೀಯತೆ ಮೀರಿ ಕೆಲಸ ಮಾಡಿದವರು
  • ರಾಜಕೀಯ, ಸಾಮಾಜಿಕ ಜೀವನ ಎಲ್ಲರಿಗೂ ಮಾದರಿ
ಇಲ್ಲಿಯ ನೆಹರು ಮೈದಾನದಲ್ಲಿ ಆಯೋಜಿಸಿದ್ದ ಬೃಹತ್​ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ಸಭಾಧ್ಯಕ್ಷ ಯು.ಟಿ. ಖಾದರ ಸೇರಿದಂತೆ ಅನೇಕ ಗಣ್ಯರ ಸಮ್ಮುಖದಲ್ಲಿ ಹೊರಟ್ಟಿ ಅವರಿಗೆ ಪುಷ್ಪಮಳೆ ಗರೆಯುವ ಮೂಲಕ ಭಿನ್ನವತ್ತಳೆ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಿಕ್ಷಕರ ಕ್ಷೇತ್ರಕ್ಕೆ ಅಷ್ಟೇ ಅಲ್ಲ ಲೋಕ ಕಲ್ಯಾಣಕ್ಕಾಗಿ ಅವರು ಮಾಡಿದ ದಶಕಗಳ ಸೇವೆಯನ್ನು ಸ್ಮರಿಸಲಾಯಿತು.

ಉಕ ಭಾಗದ ದೊಡ್ಡ ಶಕ್ತಿ

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಮಾತನಾಡಿ, ಹೊರಟ್ಟಿ ಅವರಂತಹ ಹಿರಿಯರನ್ನು ನೋಡುತ್ತ ರಾಜಕೀಯದಲ್ಲಿ ಬೆಳೆದ ನಮಗೆ ಅವರ ಮಾರ್ಗದರ್ಶನ ಸದಾ ಇರಬೇಕು. ದೇವರ ಆಶೀರ್ವಾದ ಇದ್ದರೆ 50ನೇ ವರ್ಷಾಚರಣೆಯನ್ನೂ ಮಾಡೋಣ ಎಂದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಹೊರಟ್ಟಿ ಮಾಸ್ತರ್​ ಎಂದರೆ ಎಲ್ಲರಿಗೂ ಹತ್ತಿರವಾದವರು. ಅವರು ಪ್ರತಿ ಶಿಕ್ಷಕರ ಹೃದಯದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿದ್ದಾರೆ. ಅವರು ಮಣ್ಣಿನ ಮಗ. ತಮ್ಮತನ, ಅಭಿಮಾನ ಯಾವತ್ತೂ ಬಿಟ್ಟು ಕೊಟ್ಟಿಲ್ಲ. ಸ್ವಾಭಿಮಾನದಲ್ಲಿ ರಾಜಿ ಮಾಡಿಕೊಂಡಿಲ್ಲ ಎಂದರು.