Tavi treatment ಸೆಕ್ಯೂರ್ ಆಸ್ಪತ್ರೆ ವೈದ್ಯರಿಂದ ಮಾಹಿತಿ.
- ಹುಬ್ಬಳ್ಳಿಯಲ್ಲೂ ಲಭ್ಯವಾದ ಆಧುನಿಕ ಸೌಲಭ್ಯ
- ಹೃದ್ರೋಗಿಗಳಿಗೆ ಅತ್ಯಾಧುನಿಕ ಸೌಲಭ್ಯದೊಂದಿಗೆ ಪರ್ಯಾಯ ಚಿಕಿತ್ಸೆ
ಹುಬ್ಬಳ್ಳಿ: Tavi treatment ವಿಶ್ವಮಟ್ಟದ ತಂತ್ರಜ್ಞಾನ ಆಧಾರಿತ ಆರೋಗ್ಯ ಸೇವೆ ನೀಡುತ್ತಿರುವ ಇಲ್ಲಿಯ ಗೋಕುಲ ರಸ್ತೆ ಸೆಕ್ಯೂರ್ ಆಸ್ಪತ್ರೆಯಲ್ಲಿ ಹೃದ್ರೋಗಿಗಳಿಗೆ ಅತ್ಯಾಧುನಿಕ ಸೌಲಭ್ಯದೊಂದಿಗೆ ಪರ್ಯಾಯ ಚಿಕಿತ್ಸೆ ಒದಗಿಸುವ ಮೂಲಕ ವಿಶೇಷ ಸಾಧನೆ ಮಾಡಿದೆ ಎಂದು ಡಾ. ಶರತ್ ವಿಜಾಪುರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೃದ್ರೋಗದಿಂದ ಬಳಲುತ್ತಿದ್ದ 75 ವರ್ಷದ ಮಹಿಳೆಗೆ ಅತ್ಯಾಧುನಿಕ ಟಾವಿ (ಟ್ರಾನ್ಸ್ಕ್ಯಾಥೆಟರ್ ಆರ್ಟಿಕ್ ವಾಲ್ವ್ ಇಂಪ್ಲಾಂಟೇಷನ್) ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗುಣಪಡಿಸಲಾಗಿದೆ ಎಂದು ಹೇಳಿದರು.
ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗದ ರೋಗಿಗಳಿಗೆ ಇದು ಪರ್ಯಾಯ ಚಿಕಿತ್ಸೆಯಾಗಿದೆ. ಅಸಮರ್ಥ ಅಥವಾ ಗಾಯ ತಡೆದುಕೊಳ್ಳದ ರೋಗಿಗಳಿಗೆ ಈ ವಿಧಾನ ಬಳಸಬಹುದು. ಕಾಲಿನ ರಕ್ತನಾಳದ ಮೂಲಕ ಸಣ್ಣ ಕೊಳವೆ (ಕ್ಯಾಥೆಟರ್) ಬಳಸಿ ಸಮಸ್ಯೆಯಾದ ಹೃದಯದ ಭಾಗದಲ್ಲಿ ವಾಲ್ವ್ ಅಳವಡಿಸಲಾಗುತ್ತದೆ. ಇದರಿಂದ ದೊಡ್ಡ ಗಾಯವಾಗುವುದಿಲ್ಲ. ತೀವ್ರ ರಕ್ತಸ್ರಾವ ಹಾಗೂ ಹೆಚ್ಚು ನೋವು ಸಹ ಉಂಟಾಗುವುದಿಲ್ಲ. ಈ ಚಿಕಿತ್ಸೆಯಲ್ಲಿ ರೋಗಿ ಶೀಘ್ರ ಗುಣಮುಖವಾಗುವುದರಿಂದ ಹೆಚ್ಚಿನ ಸಮಸ್ಯೆಯಾಗುವುದಿಲ್ಲ ಎಂದರು.
ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಾಧುನಿಕ ಹೃದಯ ಚಿಕಿತ್ಸೆಯನ್ನು ಸ್ಥಳಿಯವಾಗಿ ಲಭ್ಯವಾಗುವಂತೆ ಮಾಡುವುದು ಸೆಕ್ಯೂರ್ ಆಸ್ಪತ್ರೆಯ ಗುರಿಯಾಗಿದೆ. ಈ ಮೊದಲು ಅತ್ಯಾಧುನಿಕ ಸೌಲಭ್ಯಕ್ಕಾಗಿ ಹಾಗೂ ಶಸ್ತ್ರಚಿಕಿತ್ಸೆಗೆ ಬೆಂಗಳೂರು, ಮುಂಬೈಗೆ ತೆರಳುತ್ತಿದ್ದ ರೋಗಿಗಳಿಗೆ ಇನ್ನು ಮುಂದೆ ಹುಬ್ಬಳ್ಳಿಯಲ್ಲಿಯೇ ಅಂತಹ ಸೌಲಭ್ಯ ದೊರೆಯಲಿದೆ. ಇದರಿಂದ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಸಮಯ ಹಾಗೂ ಹಣ ಉಳಿತಾಯವಾಗಲಿದೆ ಎಂದರು.
ಡಾ. ಮಾರಿಸ್ ಸೆರಿಕ್ಕೋ, ಡಾ. ಉಲ್ಲಾಸ್ ಬಿ. ಇತರರು ಇದ್ದರು.