ಕುಂದಗೋಳ ತಾಲೂಕು ಆಸ್ಪತ್ರೆಗೆ Taluk Hospital ಶಾಸಕ ಎಂ.ಆರ್. ಪಾಟೀಲ ಭಾನುವಾರ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. 
ಧಾರವಾಡ

Taluk Hospital ತಾಲೂಕು ಆಸ್ಪತ್ರೆಗೆ ಶಾಸಕ ಎಂ.ಆರ್. ಪಾಟೀಲ ಭೇಟಿ

ಮಂಜುನಾಥ ಕೆಂಪಸಣ್ಣವರ

ಪ್ರಮುಖ ಮುಖ್ಯಾಂಶಗಳು

  • ಮೊಬೈಲ್ ಟಾರ್ಚ್ ಬೆಳಕಿನಲ್ಲಿ ರೋಗಿಗೆ ಹೊಲಿಗೆ ಹಾಕಿದ ಪ್ರಕರಣ
  • ನಿರ್ಲಕ್ಷೃ ತೋರಿದವರ ವಿರುದ್ಧ ಕ್ರಮಕ್ಕೆ ಸೂಚನೆ
ಕುಂದಗೋಳ: ಜನರೇಟರ್‌ಗೆ ಡೀಸೆಲ್ ಇಲ್ಲದ ಕಾರಣ ತುರ್ತು ಚಿಕಿತ್ಸೆಯ ವೇಳೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ರೋಗಿಗೆ ಹೊಲಿಗೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಶಾಸಕ ಎಂ.ಆರ್. ಪಾಟೀಲ ಭಾನುವಾರ ತಾಲೂಕು ಆಸ್ಪತ್ರೆಗೆ Taluk Hospital ಭೇಟಿ ನೀಡಿ ಪರಿಶೀಲನೆ ನಡೆಸಿ, ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಶಾಸಕ ಎಂ.ಆರ್. ಪಾಟೀಲ, ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಬರುತ್ತಿದ್ದರೂ ಡೀಸೆಲ್‌ಗೆ ಹಣ ಇಲ್ಲ ಎನ್ನುವುದು ಕ್ಷಮಿಸಲಾಗದ ತಪ್ಪು. ಬಡ ರೋಗಿಗಳ ಜೀವದ ಜತೆ ಚೆಲ್ಲಾಟವಾಡಬಾರದು. ತುರ್ತು ಸೇವೆಗಳಿಗೆ ಜನರೇಟರ್ ಸದಾ ಸಿದ್ಧವಿರಬೇಕು. ಶನಿವಾರ ನಡೆದಂತಹ ಘಟನೆ ಮರುಕಳಿಸಬಾರದು. ನಿರ್ಲಕ್ಷೃ ತೋರಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಡಿಎಚ್‌ಒ ಡಾ. ಎಸ್.ಎಂ. ಹೊನಕೇರಿ ಅವರಿಗೆ ಸೂಚಿಸಿದರು.
ಶಾಸಕರ ಆಸ್ಪತ್ರೆ ಭೇಟಿ ಮತ್ತು ತರಾಟೆಯ ನಂತರ, ಡಿಎಚ್‌ಒ ಡಾ. ಎಚ್.ಎಂ. ಹೊನಕೇರಿ ಆಸ್ಪತ್ರೆಯ ಆಡಳಿತ ಮತ್ತು ಸಿಬ್ಬಂದಿ ಜತೆಗೆ ಪ್ರತ್ಯೇಕ ಸಭೆ ನಡೆಸಿ, ಡೀಸೆಲ್ ಇಲ್ಲದ ಕಾರಣ ತುರ್ತು ಚಿಕಿತ್ಸೆಗೆ ಅಡ್ಡಿಯಾಗಿದ್ದು ಕಳವಳದ ಸಂಗತಿ. ಇನ್ಮುಂದೆ ಈ ಲೋಪ ಮರುಕಳಿಸಬಾರದು ಎಂದರು.
ಜನರೇಟರ್ ನಿರ್ವಹಣೆ ಮಾಡುತ್ತಿದ್ದ ಆಂಬುಲೆನ್ಸ್ ಡ್ರೈವರ್‌ರನ್ನು ಬದಲಾಯಿಸಿ, ಇನ್ನೊಬ್ಬರಿಗೆ ಪ್ರತ್ಯೇಕವಾಗಿ ಜನರೇಟರ್ ನಿರ್ವಹಣೆ ಜವಾಬ್ದಾರಿ ವಹಿಸಿದರು.
ಜನರೇಟರ್‌ಗೆ ಪ್ರತಿದಿನ ಡೀಸೆಲ್ ಪೂರೈಕೆ ಮತ್ತು ಪ್ರತಿದಿನ ಮೇಲ್ವಿಚಾರಣೆ ನಡೆಯಬೇಕು ಎಂದು ಸೂಚಿಸಿದರು. ಅಲ್ಲದೆ, ರೋಗಿಗಳನ್ನು ವಿನಯದಿಂದ ಸ್ವಾಗತಿಸಿ, ಸರಿಯಾದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಟಿಎಚ್‌ಒ ಡಾ. ಶಂಕರ ತುಕ್ಕಣ್ಣವರ ಹಾಗೂ ಸಿಬ್ಬಂದಿಗೆ ಸೂಚಿಸಿದರು. ಉಮೇಶ ಹೆಬಸೂರ, ಮಾಲತೇಶ ಶ್ಯಾಗೋಟಿ, ಪಾಟೀಲ, ಎನ್.ಎನ್. ಪಾಟೀಲ, ನಾಗನಗೌಡ ಸಾತ್ಮಾರ, ರವಿಗೌಡ ಪಾಟೀಲ, ಸತೀಶ ಪಾಟೀಲ, ಆಸ್ಪತ್ರೆ ಸಿಬ್ಬಂದಿ ಇದ್ದರು.