talent hunt ಹುಬ್ಬಳ್ಳಿಯಲ್ಲಿ ಗುರುವಾರ ಆಕಾಶ ಆಂಥೆ ಪ್ರತಿಭಾನ್ವೇಷಣೆ ಪರೀಕ್ಷೆ ಫಲಕಗಳನ್ನು ಹಿರಿಯ ಸಹಾಯಕ ನಿರ್ದೇಶಕ ಡಾ. ವಿಕ್ರಮ ಚಕ್ರವರ್ತಿ ಬಿಡುಗಡೆ ಮಾಡಿದರು. ಸಂಸ್ಥೆಯ ವಿಜಯಮಹಾಂತೇಶ ಮಠ, ಅನಿಲಕುಮಾರ ಎಚ್ಆರ್., ವಿಜಯಕುಮಾರ ಸಿ., ಬಿಗುಕಿಶೋರ ಬಾಬು, ಇತರರು ಇದ್ದರು.
- ವಿದ್ಯಾರ್ಥಿಗಳ ನೋಂದಣಿ ಆರಂಭ
- ಸುಮಾರು 20 ಲಕ್ಷ ಜನ ಬರುವ ನಿರೀಕ್ಷೆ
ಹುಬ್ಬಳ್ಳಿ: talent hunt ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ನಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯ ಪತ್ತೆ ಹಚ್ಚುವ ದೇಶದ ಅತಿದೊಡ್ಡ ಪ್ರತಿಭಾನ್ವೇಷಣೆ ಪರೀಕ್ಷೆ ನಿಗದಿಯಾಗಿದ್ದು, ವಿದ್ಯಾರ್ಥಿಗಳು ನೋಂದಣಿ ಮಾಡಬಹುದಾಗಿದೆ ಎಂದು ಸಂಸ್ಥೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ವಿಕ್ರಮ ಚಕ್ರವರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
"ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಮ್'ಗೆ ಕಳೆದ ವರ್ಷ 18 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದು, ಈ ವರ್ಷ ಸುಮಾರು 20 ಲಕ್ಷ ಜನ ಬರುವ ನಿರೀ
ಇದೆ. ಕಳೆದ 16 ವರ್ಷಗಳಲ್ಲಿ ಕೋಟಿಗೂ ಹೆಚ್ಚು
ನೋಂದಾಯಿಸಿಕೊಂಡಿದ್ದು, ಈ ಪರೀಕ್ಷೆಯು ಭಾರತದ ಅತ್ಯಂತ ದೀರ್ಘಕಾಲದ ಮತ್ತು ಅತಿದೊಡ್ಡ ಪ್ರತಿಭೆ ಗುರುತಿಸುವ ವೇದಿಕೆಯಾಗಿ ಹೊರಹೊಮ್ಮಿದೆ ಎಂದರು.
ವಿಜ್ಞಾನಾಧಾರಿತ ಮೌಲ್ಯಮಾಪನ ಕೇವಲ ಅಂಕಗಳನ್ನು ನೀಡದೆ, ವಿದ್ಯಾರ್ಥಿಗಳ ವಿಷಯ ಜ್ಞಾನ, ವಿಶ್ಲೇಷಣಾತ್ಮಕ ಸಾಮರ್ಥ್ಯ ಮತ್ತು ಪರೀಕ್ಷಾ ನಡವಳಿಕೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವ ನೈದಾನಿಕ ಮೌಲ್ಯಮಾಪನ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ.
ಅರ್ಹ ವಿದ್ಯಾರ್ಥಿಗಳಿಗೆ ಆಕಾಶ್ ಸಂಸ್ಥೆಯ ಕ್ಲಾಸ್ರೂಮ್, ಹೈಬ್ರಿಡ್ ಮತ್ತು ಡಿಜಿಟಲ್ ಕೋರ್ಸ್ಗಳಿಗೆ ಶೇ. 100ರ ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಅತ್ಯುತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಒಟ್ಟು 2.5 ಕೋಟಿ ಮೌಲ್ಯದ ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.
ಆಕಾಶ ಸಂಸ್ಥೆಯ ಹುಬ್ಬಳ್ಳಿ ಶಾಖಾ ವ್ಯವಸ್ಥಾಪಕ ವಿಜಯಮಹಾಂತೇಶ ಮಠ ಮಾತನಾಡಿ, ರಾಷ್ಟ್ರೀಯ ಮಟ್ಟದ ನೀಟ್ ಮತ್ತು ಜೆಇಇ ಪರೀಕ್ಷೆಗಳಲ್ಲಿ ಆಕಾಶ್ ವಿದ್ಯಾರ್ಥಿಗಳು ಸಾಧಿಸುತ್ತಿರುವ ಯಶಸ್ಸಿಗೆ ಈ ಪರೀಕ್ಷೆಯೇ ಅಡಿಪಾಯವಾಗಿದೆ. ನೀಟ್ ಯುಜಿ 2026ರ ಅಗ್ರ 100 ಶ್ರೇಯಾಂಕಿತರಲ್ಲಿ 31 ವಿದ್ಯಾರ್ಥಿಗಳು ಹಾಗೂ ಜೆಇಇ ಅಡ್ವಾನ್ಸಡ್ 2026ರ ಅಗ್ರ 100 ರ್ಯಾಂಕ್ಗಳಲ್ಲಿ 7 ವಿದ್ಯಾರ್ಥಿಗಳು ಈ ಹಿಂದೆ ಆಂಥೆ ಪರೀಕ್ಷೆಯ ಮೂಲಕವೇ ತಮ್ಮ ಶೈಕ್ಷಣಿಕ ಪಯಣ ಆರಂಭಿಸಿದ್ದರು ಎಂದು ವಿವರಿಸಿದರು.
5 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಕ್ತವಾಗಿದ್ದು, ಆನ್ಲೈನ್ ಮತ್ತು ಆಫ್ಲೈನ್ ಎರಡೂ ಮಾದರಿಗಳಲ್ಲಿ ನಡೆಯಲಿದೆ. ಅಧಿಕೃತ ಅಂಥೆ ಪೋರ್ಟಲ್ ಅಥವಾ ಹತ್ತಿರದ ಆಕಾಶ್ ಕೇಂದ್ರಗಳ ಮೂಲಕ ನೋಂದಾಯಿಸಿಕೊಳ್ಳಬಹುದು. ಆನ್ಲೈನ್ ಪರೀಕ್ಷೆ ಅಕ್ಟೋಬರ್ 27ರಿಂದ ನವೆಂಬರ್ 1ರ ವರೆಗೆ ನಡೆಯಲಿವೆ. ಆಫ್ಲೈನ್ ಪರೀಕ್ಷೆ ಅಕ್ಟೋಬರ್ 11, 25 ಮತ್ತು ನವೆಂಬರ್ 1, 2026ರಂದು ನಡೆಯಲಿದೆ ಎಂದರು.
ಆಕಾಶ ಸಂಸ್ಥೆಯ ಅನಿಲಕುಮಾರ ಎಚ್ಆರ್., ಸಹಾಯಕ ನಿರ್ದೇಶಕ ವಿಜಯಕುಮಾರ ಸಿ., ಬಿಗುಕಿಶೋರ ಬಾಬು, ಇತರರು ಇದ್ದರು.