talent day ಹುಬ್ಬಳ್ಳಿಯ ಆದರ್ಶ ಪಿಯು ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಎಂಎಲ್ಸಿ ಲಿಂಗರಾಜ ಪಾಟೀಲ, ಮಲ್ಲಿಕಾರ್ಜುನ ಸಾವಕಾರ, ಪ್ರೊ. ಎಸ್.ಬಿ. ಕುನ್ನೂರ, ಪ್ರೊ. ಬಿ.ಸಿ. ಗೌಡರ, ಡಾ. ಲಿಂಗರಾಜ ಮುಳ್ಳಳ್ಳಿ ಇದ್ದರು.
ಹುಬ್ಬಳ್ಳಿ: talent day ಸರ್ವತ್ರ ಮಾನ್ಯತೆ ಸಿಗುವ ವಿಶಿಷ್ಟ ಕೌಶಲವೇ ಪ್ರತಿಭೆ. ಇದು ಅಮೂಲ್ಯವಾದದ್ದು. ವಿದ್ಯಾರ್ಥಿಗಳಾದವರು ಪ್ರತಿಭೆಯನ್ನು ತಮ್ಮದಾಗಿಸಿಕೊಳ್ಳಲು ಪರಿಶ್ರಮ ಪಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಹೇಳಿದರು.
ಇಲ್ಲಿಯ ಲಿಂಗರಾಜ ನಗರ ಸದಾಶಿವ ವಿದ್ಯಾವರ್ಧಕ ಸಂಸ್ಥೆಯ ಆದರ್ಶ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.
ಬಡತನ ಅಥವಾ ಬೇರೆ ಕಾರಣಕ್ಕಾಗಿ ಪ್ರತಿಭೆ ಕುಂದಬಾರದು. ಅವರಿಗೆ ಅಗತ್ಯ ಸಹಾಯ ಸಹಕಾರ ನೀಡುವ ಕಾರ್ಯವೂ ಸಮಾಜದಿಂದ ನಡೆಯಬೇಕು ಎಂದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಾವಕಾರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕತ್ತಲೆ - ಬೆಳಕಿನ ಮಾರ್ಗವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಮುನ್ನಡೆಯಬೇಕು ಎಂದರು.
ನಿರ್ದೇಶಕರಾದ ಪ್ರೊ. ಎಸ್.ಬಿ. ಕುನ್ನೂರ, ಪ್ರೊ. ಬಿ.ಸಿ. ಗೌಡರ, ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ಜರುಗಿದ ನೀಟ್ ಕ್ರಾಷ್ ಕೋರ್ಸ್ನಲ್ಲಿ ತರಬೇತಿ ಪಡೆದ ಪ್ರತಿಭಾವಂತ ವಿದ್ಯಾರ್ಥಿ ಕೋಳಿವಾಡದ ಪ್ರಮೋದ ಗುಂಜಾಳ ಕಿಮ್ಸ್ನಲ್ಲಿ ವೈದ್ಯಕಿಯ ಪ್ರವೇಶ ಪಡೆದದ್ದು, ಸಂಸ್ಥೆಯ ಹೆಮ್ಮೆಯಾಗಿದೆ ಎಂದು ತಿಳಿಸಿದರು.
ಪ್ರೊ. ಡೇನಿಯಲ್ ಹೊಸಕೇರಿ, ಹಳೆಯ ವಿದ್ಯಾರ್ಥಿ ಸಿದ್ದಾರೂಢ ಅಂಗಡಿ ಮಾತನಾಡಿದರು. ಕೌಶಿಕ ಕೊರ್ಲಹಳ್ಳಿ, ಮೈತ್ರಿ ಬಿರಾದಾರ, ಪ್ರಥಮೇಶ ಮೆಣಸಿನಕಾಯಿ ಪುರಸ್ಕಾರ ಪಡೆದರು.
ಶ್ರದ್ಧಾ ದೇಸಾಯಿ ಮತ್ತು ಸಂಗಡಿಗರಿಂದ ಪ್ರಾರ್ಥನೆ ಹಾಡಿದರು. ಪ್ರಾಚಾರ್ಯ ಡಾ. ಲಿಂಗರಾಜ ಮುಳ್ಳಳ್ಳಿ ಸ್ವಾಗತಿಸಿದರು. ಪ್ರೊ. ಕವಿತಾ ಶೇಜವಾಡಕರ, ಪ್ರೊ. ಸುನಂದಾ ಮೆಣಸಿನಕಾಯಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ರಂಜಿತಾ ತುಕ್ಕಣ್ಣವರ ವಂದಿಸಿದರು.