ವ್ಯಾಪಾರಸ್ಥರು ಕೈಗೆ ಕಪ್ಪುಪಟ್ಟಿ ಧರಿಸಿ ವಹಿವಾಟು ನಡೆಸಿದರು.
ಧಾರವಾಡ: ಆನ್ಲೈನ್ ಔಷಧ ಮಾರಾಟ ವಿರೋಧಿಸಿ ದೇಶಾದ್ಯಂತ ಔಷಧ ಮಳಿಗೆಗಳನ್ನು ಬಂದ್ ಮಾಡಲು ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ (ಎಐಒಸಿಡಿ) ಕರೆ ನೀಡಿದ್ದ ಬಂದ್ಗೆ ಜಿಲ್ಲೆಯಲ್ಲಿ ಸಾಂಕೇತಿಕ ಬೆಂಬಲ ವ್ಯಕ್ತವಾಯಿತು. ರಾಜ್ಯದಲ್ಲಿ ಕರ್ನಾಟಕ ಫಾರ್ಮಾ ರಿಟೇರ್ಲಸ್ ಆ್ಯಂಡ್ ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ ಬಂದ್ಗೆ ನೈತಿಕ ಬೆಂಬಲ ನೀಡಿತು. ಮೆಡಿಕಲ್ ಶಾಪ್ಗಳನ್ನು ಬಂದ್ ಮಾಡದೆ ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸಲಾಯಿತು.
ವೈದ್ಯರು ಬರೆದುಕೊಡುವ ಪ್ರಿಸ್ಕ್ರಿಪ್ಶನ್ ನೋಡಿಯೇ ಔಷಧ ವಿತರಿಸುವುದು ಹಾಗೂ ಮೆಡ್ಪ್ಲಸ್, ಅಪೊಲೋದಂಥ ಕಂಪನಿಗಳು ನೀಡುವ ರಿಯಾಯಿತಿ ವಿರೋಧಿಸಿ ಔಷಧ ವ್ಯಾಪಾರಿಗಳ ಸಂಘಟನೆ ಬಂದ್ಗೆ ಕರೆ ನೀಡಿತ್ತು. ಧಾರವಾಡ ಜಿಲ್ಲೆಯ ಮೆಡಿಕಲ್ ಸ್ಟೋರ್, ಜನರಿಕ್ ಮತ್ತು ಜನೌಷಧಿ ಕೇಂದ್ರ ಸೇರಿ ಸುಮಾರು 8,000 ಮಳಿಗೆಗಳ ವ್ಯಾಪಾರಸ್ಥರು ಕೈಗೆ ಕಪ್ಪುಪಟ್ಟಿ ಧರಿಸಿ ವಹಿವಾಟು ನಡೆಸಿದರು.