swaranjali ಹುಬ್ಬಳ್ಳಿಯ ಈಶ್ವರಿ ಫೌಂಡೇಷನ್​ ವತಿಯಿಂದ ಸವಾಯಿ ಗಂಧರ್ವ ಹಾಲ್​ನಲ್ಲಿ ಆಯೋಜಿಸಿದ್ದ ಸ್ವರಾಂಜಲಿ ಸಂಗೀತ ಕಾರ್ಯಕ್ರಮವನ್ನು ಸ್ವರ್ಣ ಸಮೂಹ ಸಂಸ್ಥೆಯ ಎಂಡಿ ಡಾ. ವಿ.ಎಸ್​.ವಿ. ಪ್ರಸಾದ ಉದ್ಘಾಟಿಸಿದರು. ಎಂಎಲ್​ಸಿ ಪ್ರದಿಪ ಶೆಟ್ಟರ್​, ಈಶ್ವರಿ ಫೌಂಡೇಷನ್ ಅಧ್ಯಕ್ಷ ಸಂತೋಷ ವೆರ್ಣೇಕರ, ಮೇಯರ್​ ಜ್ಯೋತಿ ಪಾಟೀಲ, ಸಂಕಲ್ಪ ಶೆಟ್ಟರ, ಇತರರು ಇದ್ದರು. 
ಧಾರವಾಡ

swaranjali ಮನ ಸೆಳೆದ ಸ್ವರಾಂಜಲಿ ಸಂಗೀತ

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್​ ಸದಸ್ಯ ಪ್ರದೀಪ ಶೆಟ್ಟರ ಭಾಗಿ
  • ಈಶ್ವರಿ ಫೌಂಡೇಷನ್ ಸೇವಾ ಕಾರ್ಯಕ್ಕೆ ಮೆಚ್ಚುಗೆ
ಹುಬ್ಬಳ್ಳಿ: swaranjali ನಗರದ ಈಶ್ವರಿ ಫೌಂಡೇಷನ್​ 5ನೇ ವಾರ್ಷಿಕೋತ್ಸವದ ಅಂಗವಾಗಿ ಸವಾಯಿ ಗಂಧರ್ವ ಹಾಲ್​ನಲ್ಲಿ ಅನಾಥರ ಸಹಾಯಕ್ಕಾಗಿ ಏರ್ಪಡಿಸಿದ್ದ ಸ್ವರಾಂಜಲಿ ಸಂಗೀತ ಕಾರ್ಯಕ್ರಮ ಜನಮನ ಸೂರೆಗೊಂಡಿತು.
ವಿಧಾನ ಪರಿಷತ್​ ಸದಸ್ಯ ಪ್ರದಿಪ ಶೆಟ್ಟರ ಹಾಗೂ ಸ್ವರ್ಣ ಸಮೂಹ ಸಂಸ್ಥೆಯ ಎಂಡಿ ಡಾ. ವಿ.ಎಸ್​.ವಿ. ಪ್ರಸಾದ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಪ್ರದಿಪ ಶೆಟ್ಟರ, ಈಶ್ವರಿ ಫೌಂಡೇಷನ್​ ಪ್ರಾರಂಭವಾಗಿ 5 ವರ್ಷಗಳಾಗಿದ್ದು, ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದೆ. ಸಂಸ್ಥೆ ಅಧ್ಯಕ್ಷ ಸಂತೋಷ ವೇರ್ಣೇಕರ ಅನೇಕ ಜನರಿಗೆ ಸಹಾಯ ಹಸ್ತ ನೀಡಿದ್ದಾರೆ. ಉಚಿತ ಕಾಲು ಜೋಡಣೆ, ಉಚಿತ ಕಣ್ಣಿನ ಚಿಕಿತ್ಸೆ ಹಾಗೂ ಬಹಳ ಸಾಂಸತಿಕ ಸಾಮಾಜಿಕ ಕಾರ್ಯಕ್ರಮ ಮಾಡಿ ಮಾದರಿಯಾಗಿದ್ದಾರೆ ಎಂದರು.
ಡಾ. ವಿ.ಎಸ್​.ವಿ. ಪ್ರಸಾದ ಮಾತನಾಡಿ, ಸಂಗೀತ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಂಗೀತದಿಂದ ಹಲವು ರೋಗಗಳು ನಿವಾರಣೆ ಆಗುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ನಗರದಲ್ಲಿ ಇಂತಹ ಸಂಗೀತ ಕಾರ್ಯಕ್ರಮಗಳು ಹೆಚ್ಚು ನಡೆಯಲಿ ಎಂದು ಆಶಿಸಿದರು.
ಅತಿಥಿಯಾಗಿದ್ದ ಮೇಯರ್​ ಜ್ಯೋತಿ ಪಾಟೀಲ್​ ಮಾತನಾಡಿ, ಫೌಂಡೇಷನ್​ ಜನಪರ ಕಾರ್ಯಗಳು ಇನ್ನಷ್ಟು ಮುಂದುವರಿಯಲಿ, ಪ್ರತಿ ವರ್ಷ ಇಂತಹ ಸಂಗೀತ ಕಾರ್ಯಕ್ರಮಗಳನ್ನು ಮಾಡಿ ಜನರ ಮನಸ್ಸನ್ನು ಹಗುರ ಮಾಡಲಿ, ಎಲ್ಲ ಕ್ಷೇತ್ರಗಳಲ್ಲಿ ಬೆಳೆಯಲಿ ಎಂದು ಹೇಳಿದರು. ಎಸ್​ಎಸ್​ ಶೆಟ್ಟರ್​ ಫೌಂಡೇಷನ್​ ಸಂಕಲ್ಪ ಶೆಟ್ಟರ ಮಾತನಾಡಿದರು.
ಫೌಂಡೇಷನ್​ ಅಧ್ಯಕ್ಷ ಸಂತೋಷ ವೇರ್ಣೇಕರ, ಸಂಗಿತಕಾರ ವಿಠಲ್​ ಪಡಸಲಗಿ, ರಾಹುಲ್​ ಸಿಂದಗಿ, ಮಹಮದ್​ ರಫೀಕ್​, ರಮ್ಯಾ, ಶಂಕರ ಪುರೋಹಿತ್​, ರೇಷ್ಮೆ ದೇಶಪಾಂಡೆ, ಭೀಮರಾಜ, ರವಿಚಂದ್ರ ದೋಡಿಹಾಳ, ಶ್ರೀನಿವಾಸ ವಾಲಿಕಾರ, ವಿನಯ ಸಜ್ಜನರ.
ಮುರುಗೇಶ್​ ಶೆಟ್ಟರ, ಅಜಯ್​ ಬಾಯಕೇರಿಕರ, ಮಂಜು ವೇರ್ಣೇಕರ, ಅನುಷ ವೇರ್ಣೇಕರ, ವೇಣು ಮಾಧವ್​, ಅಭಿಷೇಕ್​ ಬೆಳಮಕರ ಇತರರು ಪಾಲ್ಗೊಂಡಿದ್ದರು.