swar sambhram ಹುಬ್ಬಳ್ಳಿಯ ಪ್ರೇರಣಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಸ್ವರ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರೊ. ಕುಮಾರಸ್ವಾಮಿ ಮೇವುಂಡಿಮಠ, ಶ್ರೀದೇವಿ ಹಿರೇಮಠ, ರಮೇಶ ರಾಠೋಡ, ಇತರರು ಪಾಲ್ಗೊಂಡಿದ್ದರು.
ಹುಬ್ಬಳ್ಳಿ: swar sambhram ಇಲ್ಲಿಯ ಕೆಎಲ್ಇ ಸಂಸ್ಥೆಯ ಪ್ರೇರಣಾ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕೆಎಲ್ಇ ಸಂಸ್ಥೆಯ ಕಹೇರ ವಿಶ್ವವಿದ್ಯಾಲಯ ಮತ್ತು ತಾಂತ್ರಿಕ ವಿಶ್ವವಿದ್ಯಾಲಯಗಳ ಕುಲಾಧಿಪತಿ, ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರ ಜನ್ಮದಿನ ಪ್ರಯುಕ್ತ "ಸ್ವರ ಸಂಭ್ರಮ' ಭಾವಗೀತೆ ಹಾಗೂ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲದೇ ಪಾಲಕರು ಹಾಗೂ ಶಿಕ್ಷಕ ವೃಂದಕ್ಕೂ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಪ್ರಾಚಾರ್ಯ ಪ್ರೊ. ಕುಮಾರಸ್ವಾಮಿ ಮೇವುಂಡಿಮಠ ಪ್ರಾಸ್ತಾವಿಕ ಮಾತನಾಡಿ, ಡಾ. ಪ್ರಭಾಕರ ಕೋರೆ ಅವರ ಜೀವನ ಸಾಧನೆ ವಿವರಿಸಿದರು.
ನಿರ್ಣಾಯಕರಾಗಿ ಕೆಎಲ್ಇ ಸಂಸ್ಥೆಯ ಎಂ.ಆರ್. ಸಾಖರೆ ಸಿಬಿಎಸ್ಇ ಹಾಗೂ ಸ್ಟೇಟ್ ಶಾಲೆಗಳ ಸಂಗೀತ ಶಿಕ್ಷಕರಾದ ಶ್ರೀದೇವಿ ಹಿರೇಮಠ ಮತ್ತು ರಮೇಶ ರಾಠೋಡ ಇವರು ಪಾಲ್ಗೊಂಡಿದ್ದರು.
ಪಾಲಕರ ಹಾಗೂ ಶಿಕ್ಷಕರ ವಿಭಾಗ ಭಾವಗೀತೆ ಸ್ಪರ್ಧೆಯಲ್ಲಿ ಅಶ್ವಿನಿ ಕಟ್ಟಿ ಪ್ರಥಮ, ಪ್ರೊ. ಸೌಮ್ಯ ರಾಮಾಪುರಮಠ ದ್ವೀತಿಯ ಹಾಗೂ ಬಸಮ್ಮ ಇಟಗಿ ತೃತೀಯ ಸ್ಥಾನ ಪಡೆದುಕೊಂಡರು.
ಳ ವಿಭಾಗದ ಭಾವಗೀತೆ ಸ್ಪರ್ಧೆಯಲ್ಲಿ ಅನಘಾ ಸಿ. ಪ್ರಥಮ, ಅಮತಾ ಕೊಳದೂರ ದ್ವೀತಿಯ ಹಾಗೂ ಇಂಚರಾ ಜಿ.ಬಿ. ತೃತೀಯ ಸ್ಥಾನ ಪಡೆದರು.
ಪದಕ, ಪ್ರಮಾಣ ಪತ್ರ ಮತ್ತು ಟ್ರೋಫಿಗಳನ್ನು ನೀಡಲಾಯಿತು. ಭಾಗವಹಿಸಿದ ಎಲ್ಲರಿಗೂ ಸಸಿಗಳನ್ನು ನೀಡಿ ಗೌರವಿಸಲಾಯಿತು.