ಲೋಕಾಯುಕ್ತರಿಂದ ದಿಢೀರ್ ಭೇಟಿ, ದಾಖಲೆಗಳ ಪರಿಶೀಲನೆ 
ಧಾರವಾಡ

ಪಾಲಿಕೆ ಅಧಿಕಾರಿಗಳಿಗೆ ಲೋಕಾಯುಕ್ತರಿಂದ ಶಾಕ್​

ಮಂಜುನಾಥ ಅಂಗಡಿ
ಧಾರವಾಡ: ಧಾರವಾಡ ಲೋಕಾಯುಕ್ತ ಎಸ್​ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಶುಕ್ರವಾರ ಮಹಾನಗರ ಪಾಲಿಕೆಯ 12 ವಲಯ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಲಾಯಿತು.
ಇ ಖಾತಾ ವಿಳಂಬ, ಸಂಗ್ರಹವಾದ ಹಣದ ಲೆಕ್ಕ, ಸಾರ್ವಜನಿಕ ಅಜಿರ್ಗಳ ವಿಲೇವಾರಿ ವಿಳಂಬ, ಕಸ ವಿಲೇವಾರಿ ಸೇರಿ ವಿವಿಧ ದೂರುಗಳು ಸಲ್ಲಿಕೆಯಾಗಿದ್ದವು. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್​. ಪಾಟೀಲ ಅವರ ಸೂಚನೆ ಮೇರೆಗೆ ಅಧಿಕಾರಿಗಳ ತಂಡ ದಿಢೀರ್​ ಭೇಟಿ ನೀಡಿತ್ತು.
ಹುಬ್ಬಳ್ಳಿ- ಧಾರವಾಡ ಅವಳಿನಗರದ 12 ವಲಯ ಕಚೇರಿಗಳ ಮೇಲೆ 12 ತಂಡಗಳು ಪ್ರತ್ಯೇಕವಾಗಿ ಭೇಟಿ ನೀಡಿದ್ದವು. ಈ ವೇಳೆ ಕಡತಗಳನ್ನು ಪರಿಶೀಲಿಸಿದಾಗ, ಸಂಗ್ರಹವಾದ ಹಣವನ್ನು ನಿಯಮಿತವಾಗಿ ಬ್ಯಾಂಕ್​ಗೆ ಜಮಾ ಮಾಡದಿರುವುದು, ಅಜಿರ್ಗಳ ವಿಲೇವಾರಿ ವಿಳಂಬ ಸೇರಿ ಹಲವು ಲೋಪಗಳು ಕಂಡುಬಂದವು. ಈ ಕುರಿತು ಲೋಕಾಯುಕ್ತ ನ್ಯಾಯಮೂರ್ತಿಳಿಗೆ ವರದಿ ನೀಡಲಾಗುವುದು ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.