summer camp ಹುಬ್ಬಳ್ಳಿಯ ಭವಾನಿನಗರದ ನಂಜನಗೂಡು ಶ್ರೀರಾವೇಂದ್ರ ಸ್ವಾಮಿ ಮಠದಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು. 
ಧಾರವಾಡ

summer camp ಧಾರ್ಮಿಕ ಶಿಕ್ಷಣ ಶಿಬಿರಾರ್ಥಿಗಳಿಗೆ ಬಹುಮಾನ

ಬಸವರಾಜ ಎಸ್. ಇದ್ಲಿ
ಹುಬ್ಬಳ್ಳಿ: summer camp ಶ್ರೀಪಾದಂಗಳವರ ಆಜ್ಞಾನುಸಾರ ಭವಾನಿನಗರದಲ್ಲಿರುವ ನಂಜನಗೂಡು ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಮಂತ್ರಾಲಯದ ಶ್ರೀಗುರುಸಾರ್ವಭೌಮ ಸಂಸ್ಕೃತ ವಿದ್ಯಾಪಿಠವು ತ್ರಿಮತಸ್ಥ ಉಪನೀತ ವಟುಗಳು, ಪುರುಷರು, ಬಾಲಕಿಯರು ಹಾಗೂ ಸ್ತ್ರೀಯರಿಗೆ ನುರಿತ ಅಧ್ಯಾಪಕರಿಂದ 9 ದಿನಗಳ ಕಾಲ ಬೇಸಿಗೆ ಶಿಬಿರ ಏರ್ಪಡಿಸಿತ್ತು.
ಧಾರ್ಮಿಕ ಶಿಕ್ಷಣ ಶಿಬಿರವು ನಿತ್ಯ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ನಡೆಯಿತು. ಮಂಗಳವಾರ ಶಿಬಿರದ ಮುಕ್ತಾಯ ಸಮಾರಂಭ ನೆರವೇರಿಸಲಾಯಿತು. ಶಿಬಿರಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ಅಧ್ಯಾಪಕರಿಂದ ಅನೇಕ ವಿಷಯಗಳನ್ನು ತಿಳಿದುಕೊಂಡರು.