ಶ್ರಾವಣಿ ಕಾಳೆ ಆತ್ಮಹತ್ಯೆ (suicide)
ಹುಬ್ಬಳ್ಳಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಇಲ್ಲಿಯ ಉಣಕಲ್ ಸಿದ್ದಕಲ್ಯಾಣ ನಗರದ ವಿದ್ಯಾರ್ಥಿನಿಯೊಬ್ಬರು ಮನನೊಂದು ಆತ್ಮಹತ್ಯೆ (suicide) ಮಾಡಿಕೊಂಡ ಘಟನೆ ನಡೆದಿದೆ.
ಶ್ರಾವಣಿ ಮಾರುತಿ ಕಾಳೆ (18) ಮೃತ ವಿದ್ಯಾರ್ಥಿನಿ. ಕನಕದಾಸ ಕಾಲೇಜ್‌ನಲ್ಲಿ ಓದುತ್ತಿದ್ದ ಈ ವಿದ್ಯಾರ್ಥಿನಿ, ವಾಣಿಜ್ಯ ವಿಭಾಗದಲ್ಲಿ ಶೇ. 71ರಷ್ಟು ಅಂಕ ಪಡೆದಿದ್ದಳು. ಶೇ. 85ರಷ್ಟು ಫಲಿತಾಂಶ ಬರುವ ನಿರೀಕ್ಷೆ ಇಟ್ಟುಕೊಂಡಿದ್ದಳು. ನಿರೀಕ್ಷಿತ ಅಂಕ ಬಾರದ್ದರಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ವಿದ್ಯಾನಗರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.