ಹುಬ್ಬಳ್ಳಿಯ (skill) ಬ್ರೖೆಟ್ ಬಿಜಿನೆಸ್ ಸ್ಕೂಲ್​ನಲ್ಲಿ ಏರ್ಪಡಿಸಿದ್ದ ಕ್ಯಾಂಪಸ್ ಸಂದರ್ಶನ ಉದ್ಘಾಟನೆ ಸಮಾರಂಭದಲ್ಲಿ ಡಾ. ಪ್ರಸಾದ ರೂಡಗಿ, ಪ್ರದೀಶ್ ನಾಯರ್, ಅದಿತಿ, ಯೋಗೇಶ, ಆಲಿಯಾ ಇತರರು ಇದ್ದರು. 
ಧಾರವಾಡ

ಎಂಬಿಎ (Skill) ಜತೆಗೆ ಕೌಶಲ ಬೆಳೆಸಿಕೊಳ್ಳಿ

ಬಸವರಾಜ ಎಸ್. ಇದ್ಲಿ

ಪ್ರಮುಖ ಮುಖ್ಯಾಂಶಗಳು

  • ಐಟಿಸಿ ಕಂಪನಿಯ ಪ್ರದೀಶ್ ನಾಯರ್ ಸಲಹೆ
  • ಬ್ರೖೆಟ್ ಬಿ ಸ್ಕೂಲ್​ನಲ್ಲಿ ಕ್ಯಾಂಪಸ್ ಸಂದರ್ಶನ
ಹುಬ್ಬಳ್ಳಿ: ಎಂಬಿಎ ಪದವಿ ಪಡೆಯುವುದರೊಂದಿಗೆ (MBA Skill) ಕಾರ್ಪೋರೇಟ್ ಜಗತ್ತಿನ ಸವಾಲುಗಳು ಸಮರ್ಥವಾಗಿ ಎದುರಿಸಿ ಅವಕಾಶಗಳನ್ನು ಪಡೆದುಕೊಳ್ಳುವ ಕೌಶಲ ಮತ್ತು ಸಾಮರ್ಥ್ಯಳನ್ನು ಬೆಳೆಸಿಕೊಳ್ಳಬೇಕು ಎಂದು ಐಟಿಸಿ ಕಂಪನಿಯ ಜನರಲ್ ಟ್ರೇಡ್ ವಿಭಾಗದ ವ್ಯವಸ್ಥಾಪಕ ಪ್ರದೀಶ್ ನಾಯರ್ ಹೇಳಿದರು.
ಇಲ್ಲಿಯ ಗೋಕುಲ ರಸ್ತೆ ಬ್ರೖೆಟ್ ಬಿಜಿನೆಸ್ ಸ್ಕೂಲ್​ನಲ್ಲಿ ಆಯೋಜಿಸಿದ್ದ ಕ್ಯಾಂಪಸ್ ಸಂದರ್ಶನ ಅಭಿಯಾನದಲ್ಲಿ ಅವರು ಮಾತನಾಡಿದರು.
ಯಾವುದೇ ಜ್ಞಾನವನ್ನು ಹೊಂದಿದ್ದರೂ ನೀವು ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ಕೆಲಸದಲ್ಲಿ ನಿಮ್ಮ ಅತ್ಯುತ್ತಮವಾದ ಕೌಶಲವನ್ನು ತೋರ್ಪಡಿಸಬೇಕು ಎಂದ ಅವರು, ಐಟಿಸಿ ಕಂಪನಿಯ ಇತಿಹಾಸ, ಸಾಧನೆಗಳು, ಬ್ರ್ಯಾಂಡ್​ಗಳು, ಮಾರುಕಟ್ಟೆ ವ್ಯಾಪ್ತಿ, ಆರ್ಥಿಕ ಕಾರ್ಯಕ್ಷಮತೆ ಇತ್ಯಾದಿಗಳ ಕುರಿತು ಪ್ರಸ್ತುತಪಡಿಸಿದರು.
ಬ್ರೖೆಟ್ ಬಿಜಿನೆಸ್ ಸ್ಕೂಲ್ ಉತ್ತರ ಕರ್ನಾಟಕದ ಎಂಬಿಎ ವಿದ್ಯಾರ್ಥಿಗಳಿಗಾಗಿ ಪ್ರಮುಖ ಎಫ್​ಎಂಸಿಜಿ ಮಲ್ಟಿಬ್ರ್ಯಾಂಡ್ ಕಂಪನಿ ಐಟಿಸಿಗಾಗಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಿತ್ತು. ಇದುವರೆಗೆ 30ಕ್ಕೂ ಹೆಚ್ಚು ಎಂಬಿಎ ವಿದ್ಯಾರ್ಥಿಗಳನ್ನು ಪ್ರಮುಖ ಕಂಪನಿಗಳಿಗೆ ಕಳಿಸಿದೆ. ಈ ಭಾಗದ ಎಂಬಿಎ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಲು ಕ್ಯಾಂಪಸ್ ಡ್ರೖೆವ್ ಆಯೋಜಿಸಲಾಗಿತ್ತು.
ಬ್ರೖೆಟ್ ಬಿಜಿನೆಸ್ ಸ್ಕೂಲ್ ನಿರ್ದೇಶಕ ಡಾ. ಪ್ರಸಾದ ರೂಡಗಿ ಮಾತನಾಡಿ, ಈ ಭಾಗವನ್ನು ಉದ್ಯೋಗಾವಕಾಶಗಳಿಗೆ ಅತ್ಯುತ್ತಮ ಪ್ರದೇಶವನ್ನಾಗಿ ಮಾಡುವುದು ಮತ್ತು ಕಾರ್ಪೋರೇಟ್ ನಿರೀಕ್ಷೆಗಳನ್ನು ಪೂರೈಸುವತ್ತ ಕೆಲಸ ಮಾಡುವುದು ನಮ್ಮ ಉದ್ದೇಶ ಎಂದರು.
ಐಟಿಸಿ ಮಾನವ ಸಂಪನ್ಮೂಲ ವ್ಯವಸ್ಥಾಪಕಿ ಅದಿತಿ, ಬ್ರ್ಯಾಂಡ್ ಆಧಾರಿತ ರಸಪ್ರಶ್ನೆ ಸ್ಪರ್ಧೆ ನಡೆಸಿದರು. ಧಾರವಾಡದ ಕೌಸಾಳಿ ಇನ್​ಸ್ಟಿಟ್ಯೂಟ್, ಕೆಎಲ್​ಇ ಸಂಸ್ಥೆಯ ಐಎಂಎಸ್​ಆರ್, ಗ್ಲೋಬಲ್ ಬಿಜಿನೆಸ್ ಸ್ಕೂಲ್, ಡಿವಿಎಚ್ ಐಎಂಎಸ್​ಆರ್, ಐಇಎಂಎಸ್​ನಿಂದಲೂ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು.
ಉದ್ಯೋಗ ನಿಯೋಜನೆ ಅಧಿಕಾರಿ ಯೋಗೇಶ್ ಮತ್ತು ಪ್ರೊ. ಆಲಿಯಾ ಮತ್ತು ಪ್ರೊ. ಗೌರಿ ನೆರ್ಸೆಕರ್ ಕಾರ್ಯಕ್ರಮ ಸಂಯೋಜಿಸಿದ್ದರು. ಕೃತಿಕಾ ಕಾರ್ಯಕ್ರಮ ನಿರೂಪಿಸಿದರು.