tekwando ಟೆಕ್ವಾಂಡೋದಲ್ಲಿ ಸಾಧನೆ ಮಾಡಿದ ಹುಬ್ಬಳ್ಳಿ ಜೈಂಟ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು.
ಹುಬ್ಬಳ್ಳಿ: (Tekwando) ಬೆಂಗಳೂರಿನ ವೆಸ್ಟಾರ್ಸ್ ಸೂಪರ್ ಲೀಗ್ ಚಾಂಪಿಯನ್ಸ್ ಚಾಲೆಂಜ್, ಟೆಕ್ವಾಂಡೋ ಚಾಂಪಿಯನ್ಶಿಪ್ ಇವರು ಇತ್ತೀಚೆಗೆ ಏರ್ಪಡಿಸಿದ್ದ ಟೆಕ್ವಾಂಡೋ ಚಾಂಪಿಯನ್ಶಿಪ್ನಲ್ಲಿ ನಗರದ ಜೈಂಟ್ಸ್ ಆಂಗ್ಲ ಮಾಧ್ಯಮ ಶಾಲೆಯ 9 ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ಒಟ್ಟು 18 ಪದಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಪ್ರಣಯ ಕುರಬರ 2 ಚಿನ್ನದ ಪದಕ, ವಿಕ್ರಾಂತ ದೊಡ್ಡಮನೆ, ವಿಶ್ವಾಸ ಕಾಂಬಳೆ, ಸೈರಾಜ್ ಛಬ್ಬಿ ಹಾಗೂ ಕುಶಾಲ ತಡಹಾಳ ತಲಾ 1 ಚಿನ್ನ, 1 ಬೆಳ್ಳಿ, ಮೋಹಿತ್ ಎಂ.ಬಿ. 1 ಕಂಚು, 1 ಬೆಳ್ಳಿ, ಪ್ರಥಮ ಕುರಬರ 2 ಬೆಳ್ಳಿ, ಲಾಸ್ಯಪ್ರೀಯಾ, ಕಾತಿರ್ಕೇಯಾ ಕೆ. ತಲಾ 2 ಬೆಳ್ಳಿ ಪದಕ ಪಡೆದಿದ್ದಾರೆ. ತರಬೇತಿದಾರರಾದ ಅರ್ಜುನ ಎಲೆಗಾರ, ಸುಧಾ ಕಾಂಬಳೆ ತರಬೇತಿ ನೀಡಿದ್ದರು.