step mother ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ಮಾತನಾಡಿದರು. 
ಧಾರವಾಡ

step mother ರಾಜ್ಯ ಸರ್ಕಾರದಿಂದ ಉ.ಕ. ತಾರತಮ್ಯ

ಪ್ರಮುಖ ಮುಖ್ಯಾಂಶಗಳು

  • ಪ್ರತ್ಯೇಕ ರಾಜ್ಯ ಹೋರಾಟ ತೀವ್ರಗೊಳಿಸಲು ನಿರ್ಧಾರ
  • ರಾಜ್ಯಕ್ಕೆ ಒಂದೇ ಕಾನೂನು ವಿಶ್ವವಿದ್ಯಾಲಯ ಇರಬೇಕು

ಹುಬ್ಬಳ್ಳಿ:

step mother

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿಯಲ್ಲಿ ಎರಡು ದಶಕದಿಂದ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಒಡೆದು ಬೆಂಗಳೂರಿನಲ್ಲಿ ಮತ್ತೊಂದು ವಿಶ್ವವಿದ್ಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದು ಉತ್ತರ ಕರ್ನಾಟಕದ ಬಗ್ಗೆ ತಾರತಮ್ಯ ಮನೋಭಾವ ತೋರಿಸುತ್ತದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರಲ್ಲಿ ಹುಬ್ಬಳ್ಳಿಯ ನವನಗರದಲ್ಲಿ ಕಾನೂನು ವಿವಿ ಸ್ಥಾಪನೆಯಾಗಿದೆ. ಇದೀಗ ಬೆಂಗಳೂರಿನಲ್ಲಿ ಕಾನೂನು ವಿವಿ ಸ್ಥಾಪನೆಗೆ ಸರ್ಕಾರ ಉತ್ಸುಕತೆ ತೋರಿದ್ದು, ಇದಕ್ಕಾಗಿ ನವನಗರದ ವಿವಿಗೆ ಪತ್ರ ಬರೆದು ಅಗತ್ಯ ಮಾಹಿತಿ ನೀಡುವಂತೆ ಕೋರಿದೆ ಎಂದರು.
ಬೆಂಗಳೂರಿಗೆ ಪ್ರತ್ಯೇಕ ವಿವಿ ಮಾಡುವ ಆಲೋಚನೆ ಸರ್ಕಾರಕ್ಕೆ ಇದ್ದರೆ ಹುಬ್ಬಳ್ಳಿಯಲ್ಲಿರುವ ವಿವಿಯ ಬಲ ಕಡಿಮೆಯಾಗುತ್ತದೆ. ಇದರ ಘನತೆ ಕುಗ್ಗಲಿದೆ. ರಾಜ್ಯಕ್ಕೆ ಒಂದೇ ಕಾನೂನು ವಿಶ್ವವಿದ್ಯಾಲಯ ಇರಬೇಕು. ಹಾಗಾಗಿ ಇದರ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದರು.
ರಾಜ್ಯದಲ್ಲಿ 59 ವಿಶ್ವವಿದ್ಯಾಲಯಗಳಿದ್ದು, ಇದರಲ್ಲಿ ಶೇ. 85ರಷ್ಟು ಬೆಂಗಳೂರು ಹಾಗೂ ದಕ್ಷಿಣ ಕರ್ನಾಟಕದಲ್ಲಿವೆ. ಆ ಎಲ್ಲ ವಿವಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರ ಅಥವಾ ಇಬ್ಬಾಗ ಮಾಡಿ ಸ್ಥಾಪನೆ ಮಾಡುವರೆ? ಎಂದು ಪ್ರಶ್ನಿಸಿದರು.
ಒಂದು ವೇಳೆ ಉತ್ತರ ಕರ್ನಾಟಕ ವಿಶ್ವವಿದ್ಯಾಲಯಗಳ ಶಕ್ತಿ ಕ್ಷೀಣ ಮಾಡುವುದು, ತಾರತಮ್ಯ ನೀತಿ ಮುಂದುವರಿಸಿದರೆ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ತೀವ್ರಗೊಳಿಸಲಾಗುವುದು. ಈಗಾಗಲೇ 2 ಕೋಟಿಗೂ ಹೆಚ್ಚಿನ ಜನರು ಪ್ರತ್ಯೇಕ ರಾಜ್ಯ ಬೇಕೆಂದು ಸಹಿ ಹಾಕಿದ್ದಾರೆ. ಇದು ನಾಡದ್ರೋಹದ ಕೆಲಸವಲ್ಲ. ಮತ್ತೊಂದು ಕನ್ನಡ ನಾಡನ್ನು ಕಟ್ಟುವ ಕೆಲಸ ಎಂದು ಹೇಳಿದರು.
ಉತ್ತರ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಕುಮಾರ ಹಕಾರಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬರುವ ಅಧಿವೇಶನದಲ್ಲಿ ಪ್ರತ್ಯೇಕ ರಾಜ್ಯ ಪ್ರಸ್ತಾವಣೆಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಿ. ಈ ಬಾರಿಯೂ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡುತ್ತೇವೆ ಎಂದರು.
ಮಂಗಳೂರು, ಉಡುಪಿ ಜಿಲ್ಲೆಯವರು ಪ್ರತ್ಯೇಕ ಹೈಕೋರ್ಟ್​ ಪೀಠಕ್ಕಾಗಿ ಆಗ್ರಹಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಒಳಗೊಂಡು ವ್ಯಾಪ್ತಿ ನಿಗದಿಪಡಿಸಲಾಗುತ್ತಿದೆ. ಇದು ಸರಿಯಲ್ಲ. ಉತ್ತರ ಕನ್ನಡದ ಜನರು ಹುಬ್ಬಳ್ಳಿ ಧಾರವಾಡಕ್ಕೆ ಸಮೀಪದಲ್ಲಿದ್ದಾರೆ ಎಂದರು.
ಸಮಿತಿ ಗೌರವ ಸಲಹೆಗಾರ ರವಿ ಕುಮಟಗಿ, ಉ.ಕ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಮಂಜುನಾಥ ಹಗೇದಾರ, ಈರಣ್ಣ ಎಮ್ಮಿ, ಸೋಮಲಿಂಗ ಜಗದಾಳ, ರಾಜಶೇಖರ ಕುಬಸದ, ಬಸವರಾಜ ತೇರದಾಳ ಇತರರು ಗೋಷ್ಠಿಯಲ್ಲಿದ್ದರು.