ಸುದ್ದಿಗೋಷ್ಠಿಯಲ್ಲಿ (Star singer)ಕೇಶವ ಗುರಂ ಫೌಂಡೇಷನ್ ಅಧ್ಯಕ್ಷ ಶಿವು ಗುರಂ ಮಾತನಾಡಿದರು. ವಿಶಾಲ ರಾಜೂರ, ಶ್ರೀಪಾದ ಕುಲಕರ್ಣಿ, ಸಂದೀಪ, ಇತರರು ಇದ್ದರು. 
ಧಾರವಾಡ

ಸ್ಟಾರ್ ಸಿಂಗರ್ (Star singer) ಫೈನಲ್ ಫೆ. 1ರಂದು

ಸಂತೋಷ ವೈದ್ಯ
ಹುಬ್ಬಳ್ಳಿ: ಸ್ಕೈಲೈಟ್ ಎಕ್ಸೋರಾ (Star singer) ಹಾಗೂ ಕೇಶವ ಗುರಂ ಫೌಂಡೇಷನ್ ಸಂಘಟಿಸಿರುವ ಮೊದಲ ಆವೃತ್ತಿಯ ಹುಬ್ಬಳ್ಳಿ ಸ್ಟಾರ್ ಸಿಂಗರ್ ಕರೋಕೆ ಗಾಯನ ಸ್ಪರ್ಧೆಯ ಫೈನಲ್ ಫೆ. 1 ರಂದು ಸಂಜೆ 4 ಗಂಟೆಗೆ ಗೋಕುಲ ರಸ್ತೆ ಕ್ಯೂಬಿಕ್ಸ್ ಹೊಟೇಲ್​ನಲ್ಲಿ ನಡೆಯಲಿದೆ ಎಂದು ಫೌಂಡೇಷನ್ ಅಧ್ಯಕ್ಷ ಶಿವು ಗುರಂ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸೆಮಿಫೈನಲ್ ನಡೆಸಲಾಗುವುದು. ಸೆಮಿಫೈನಲ್​ಗೆ 25 ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ 15 ಜನ ಸ್ಪರ್ಧಿಗಳು ಫೈನಲ್​ಗೆ ಪ್ರವೇಶ ಪಡೆಯಲಿದ್ದಾರೆ. ಫೈನಲ್ ಸ್ಪರ್ಧೆಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಇರುತ್ತದೆ ಎಂದು ಹೇಳಿದರು.
ಅತಿಥಿಗಳಾಗಿ ಶಾಸಕ ವಿಜಯಾನಂದ ಕಾಶಪ್ಪನವರ, ಎಂಎಲ್​ಸಿ ಪ್ರದೀಪ ಶೆಟ್ಟರ್, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಇನ್ನಿತರರು ಭಾಗವಹಿಸಿವರು. ನಿರ್ಣಾಯಕರಾಗಿ ಮೊಹಮ್ಮದ ಶಫಿ, ಜಮೀರ್ ಖಾನ್, ಪ್ರಶಾಂತ ಆರ್.ಕೆ., ಶ್ರೀಧರ ಕುಲಕರ್ಣಿ, ವಿಠ್ಠಲ್ ಕಾರ್ಯನಿರ್ವಹಿಸುವರು. ವಿಜೇತರಿಗೆ 10 ಸಾವಿರ ರೂ. ನಗದು ಹಾಗೂ ಟ್ರೋಫಿ, ರನ್ನರ್ ಅಪ್ ಗೆ 5 ಸಾವಿರ ರೂ. ನಗದು ಮತ್ತು ಟ್ರಫಿ ಹಾಗೂ ಮೂವರಿಗೆ ಸಮಾಧಾನಕರ ಬಹುಮಾನವಾಗಿ ತಲಾ 1500 ರೂ. ನೀಡಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸ್ಕೈಲೈಟ್ ಎಕ್ಸೋರಾದ ವಿಶಾಲ ರಾಜೂರ, ಶ್ರೀಪಾದ ಕುಲಕರ್ಣಿ, ಸಂದೀಪ, ಇತರರು ಇದ್ದರು.