ಹುಬ್ಬಳ್ಳಿಯಲ್ಲಿ ಸೋಮವಾರ ಏರ್ಪಡಿಸಿದ್ದ (ssk) ರಾಜ್ಯ ಎಸ್‌ಎಸ್‌ಕೆ ಯುವ ಘಟಕದ ಭವ್ಯ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷರಾಗಿ ನೇಮಕವಾದ ವೆಂಕಟೇಶ ಕಾಟವೆ ಅವರಿಗೆ ಡಾ. ಶಶಿಕುಮಾರ ಮೆಹರವಾಡೆ ಅವರು ಧ್ವಜ ನೀಡಿ ಶುಭಕೋರಿದರು.
- ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ ಮೆಹರವಾಡೆ ಹೇಳಿಕೆ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಎಸ್‌ಎಸ್‌ಕೆ (ssk) ಸಮಾಜ ಆಶ್ರಯದಲ್ಲಿ ಇಲ್ಲಿಯ ಗೋಕುಲ ರೋಡ್‌ನಲ್ಲಿರುವ ಕ್ಯೂಬಿಕ್ಸ್ ಹೋಟೆಲ್‌ನಲ್ಲಿ ಸೋಮವಾರ ರಾಜ್ಯ ಎಸ್‌ಎಸ್‌ಕೆ ಯುವ ಘಟಕದ ಭವ್ಯ ಸಮಾವೇಶದ ಪೂರ್ವಭಾವಿ ಸಭೆ ಏರ್ಪಾಟಾಗಿತ್ತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎಸ್‌ಎಸ್‌ಕೆ ಸಮಾಜ ಯುವ ಘಟಕದ ಅಧ್ಯಕ್ಷರನ್ನಾಗಿ ವೆಂಕಟೇಶ ಕಾಟವೆ ಹಾಗೂ ಧಾರವಾಡ ಜಿಲ್ಲಾಧ್ಯಕ್ಷರನ್ನಾಗಿ ಯೋಗೇಶ ಹಬೀಬ ಸೇರಿದಂತೆ ರಾಜ್ಯದ ಹದಿಮೂರು ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ಅಧಿಕೃತವಾಗಿ ನೇಮಕ ಮಾಡಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ ಮೆಹರವಾಡೆ, ಸಮಾಜದ ಬಲಿಷ್ಠ ಭವಿಷ್ಯ ನಿರ್ಮಾಣಕ್ಕೆ ಯುವಶಕ್ತಿಯ ಪಾತ್ರ ಅತ್ಯಂತ ಪ್ರಮುಖವಾಗಿದೆ. ಯುವಕರು ಎದ್ದರೆ ಸಮಾಜ ಎದ್ದು ನಿಲ್ಲುತ್ತದೆ; ಸಮಾಜ ಎದ್ದರೆ ಹೊಸ ಇತಿಹಾಸ ನಿರ್ಮಾಣವಾಗುತ್ತದೆ ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.
ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಪೂರ್ವಭಾವಿ ಸಭೆಗಳನ್ನು ಆಯೋಜಿಸಿ, ಮುಂದಿನ ದಿನಗಳಲ್ಲಿ ಎಸ್‌ಎಸ್‌ಕೆ ಸಮಾಜದ ಯುವ ಘಟಕದ ಐತಿಹಾಸಿಕ ರಾಜ್ಯಮಟ್ಟದ ಸಮಾವೇಶ ನಡೆಸುವ ಗುರಿಯನ್ನು ಹೊಂದಿದ್ದೇವೆ. ರಾಜ್ಯದ ಮೂಲೆಮೂಲೆಗಳಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಯುವಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಅಶೋಕ ಕಾಟವೆ, ಎಸ್‌ಎಸ್‌ಕೆ ಸಮಾಜ ಹು-ಧಾ ಚೀಫ್ ಟ್ರಸ್ಟಿ ಸತೀಶ ಮೆಹರವಾಡೆ, ಹಿರಿಯರಾದ ಶ್ಯಾಮ ಕಬಾಡೆ, ಟಿ.ಎಂ. ಮೆಹರವಾಡೆ, ಭಾಸ್ಕರ ಜಿತೂರಿ, ವಿಠ್ಠಲ ಲದವಾ, ಅಶೋಕ ರಾಯಬಾಗಿ, ಮಾರುತಿರಾವ್ ಪವಾರ, ರಾಮಚಂದ್ರ ಕಬಾಡೆ, ಕೃಷ್ಣಮೂರ್ತಿ ರಂಗ್ರೇಜ್, ನೀಲಕಂಠಸಾ ಜಡಿ, ರಮೇಶ ಬುರಬುರೆ, ಗೋಪಾಲ ಬದ್ದಿ, ಶಂಕರಸಾ ಲದವಾ, ನಾಗೇಶ ಕಲಬುರ್ಗಿ, ಸಂಜಯ ಮಿಸ್ಕಿನ್, ನಾರಾಯಣಸಾ ನಿರಂಜನ, ಡಿ.ಕೆ. ಚವ್ಹಾಣ, ಗಣಪತಸಾ ಹಬೀಬ, ರಾಜೇಶ್ವರಿ ಜಡಿ, ಪುಷ್ಪಾ ಪವಾರ ಇತರರಿದ್ದರು.