ಹುಬ್ಬಳ್ಳಿಯ ಕನಕದಾಸ sriramasene ಕಾಲೇಜ್‌ನಲ್ಲಿ ಶ್ರೀರಾಮ ಸೇನಾ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಸೋಮವಾರ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಲಾಯಿತು. 
ಧಾರವಾಡ

sriramasene ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಣೆ

ಹುಬ್ಬಳ್ಳಿ: ರಾಜ್ಯ ಸರ್ಕಾರವು ಶಾಲಾ-ಕಾಲೇಜ್‌ಗಳಲ್ಲಿ ಹಿಜಾಬ್‌ಗೆ ಅನುಮತಿಸಿದ್ದನ್ನು ವಿರೋಧಿಸಿ ಶ್ರೀರಾಮ ಸೇನಾ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ sriramasene ವತಿಯಿಂದ ನಗರದ ವಿವಿಧ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಗೆ ಸೋಮವಾರ ಕೇಸರಿ ಶಾಲು ವಿತರಿಸಲಾಯಿತು.
ವಿದ್ಯಾನಗರದ ಕನಕದಾಸ ಕಾಲೇಜ್, ಮಹಿಳಾ ವಿದ್ಯಾಪೀಠ ಸೇರಿ ವಿವಿಧ ಶಾಲಾ-ಕಾಲೇಜ್‌ನಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳಿಗೆ ಶಾಲು ಹೊದ್ದುಕೊಂಡು ಕಾಲೇಜ್ ಆವರಣ ಪ್ರವೇಶಿಸುವಂತೆ ಮತ್ತು ಪ್ರತಿ ನಿತ್ಯ ಶಾಲು ಧರಿಸಿಕೊಂಡೇ ಬರುವಂತೆ ಮನವಿ ಮಾಡಿದರು.
ಹಿಜಾಬ್ ವಿಷಯ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಆದರೂ, ರಾಜ್ಯ ಸರ್ಕಾರವು ಹಿಜಾಬ್ ಧರಿಸಲು ಅನುಮತಿ ನೀಡಿದೆ. ಈ ಮೂಲಕ ವಿದ್ಯಾರ್ಥಿಗಳ ಮಧ್ಯೆ ಧರ್ಮದ ವಿಷ ಬೀಜ ಬಿತ್ತುವ ಹುನ್ನಾರ ನಡೆಸಿದೆ. ಕಾಂಗ್ರೆಸ್‌ನವರು ಮರಿ ತಾಲೀಬಾನಿಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ.
ಎಲ್ಲ ಮತ, ಸಂಪ್ರದಾಯಗಳಿಗೆ ಆದ್ಯತೆ ಕೊಡಬೇಕು. ಸರ್ಕಾರದ ನಿರ್ಧಾರದಿಂದ ಸಮವಸ್ತ್ರ ಸಂಹಿತೆ ಉದ್ದೇಶ ಮಣ್ಣು ಪಾಲಾಗುತ್ತ್ತಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಸುಣ್ಣ ನೀತಿ ಅನುಸರಿಸಲಾಗುತ್ತಿದೆ ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಪರ ಸಂಘಟನೆಯ ಮುಖಂಡ ರಘು ಯಲ್ಲಕ್ಕನವರ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಸಮುದಾಯದ ತುಷ್ಟೀಕರಣಕ್ಕಾಗಿ ಶಾಲಾ-ಕಾಲೇಜ್‌ಗಳಲ್ಲಿ ಶಿಸ್ತು ಮತ್ತು ಸಮಾನತೆಯನ್ನು ಹಾಳು ಮಾಡುತ್ತಿದೆ. ಹಿಜಾಬ್‌ಗೆ ನೀಡಿರುವ ಅನುಮತಿಯನ್ನು ತಕ್ಷಣವೇ ಹಿಂಪಡೆಯಬೇಕು. ಅಲ್ಲಿಯವರೆಗೂ ನಮ್ಮ ಕೇಸರಿ ಶಾಲು ವಿತರಣೆ ಅಭಿಯಾನ ನಿರಂತರವಾಗಿ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.
ಕೇಸರಿ ಶಾಲು ವಿತರಣೆ ಸಂಬಂಧಿಸಿದ ಮಾಹಿತಿ ಹಿನ್ನೆಲೆಯಲ್ಲಿ ಶಾಲಾ-ಕಾಲೇಜ್ ಮುಂಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.