ಹುಬ್ಬಳ್ಳಿಯ ಖ್ಯಾತ ನೇತ್ರ ತಜ್ಞ srinivas joshiಡಾ. ಶ್ರೀನಿವಾಸ ಜೋಶಿ ಅವರು ‘ರೇಟ್-ಬಕ್ಲರ್’ ಪ್ರಶಸ್ತಿ ಪಡೆದರು. 
ಧಾರವಾಡ

srinivas joshi ಡಾ. ಶ್ರೀನಿವಾಸ ಜೋಶಿಗೆ ರೇಟ್-ಬಕ್ಲರ್ ಪ್ರಶಸ್ತಿ

ಪ್ರಮುಖ ಮುಖ್ಯಾಂಶಗಳು

  • ಸತತ 8ನೇ ಬಾರಿ ಮುಡಿಗೇರಿಸಿಕೊಂಡ ಖ್ಯಾತಿ
ಹುಬ್ಬಳ್ಳಿ: ಕೆನಡಾದ ಮಾಂಟ್ರಿಯಲ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಮೆರಿಕನ್ ಸೊಸೈಟಿ ಆಫ್ ರೆಟಿನಲ್ ಸ್ಪೆಷಲಿಸ್ಟ್ಸ್ (ಎಎಸ್‌ಆರ್‌ಎಸ್) ವಾರ್ಷಿಕ ಸಮ್ಮೇಳನದಲ್ಲಿ ಅತ್ಯುತ್ತಮ ಶಸ್ತ್ರಚಿಕಿತ್ಸಾ ವಿಡಿಯೋ ಪ್ರದರ್ಶನಕ್ಕಾಗಿ ಇಲ್ಲಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ srinivas joshi ಅವರು‘ರೇಟ್-ಬಕ್ಲರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದನ್ನು ರೆಟಿನಲ್ ಶಸ್ತ್ರಚಿಕಿತ್ಸೆಯ ‘ಆಸ್ಕರ್’ ಎಂದು ಕೂಡ ಕರೆಯಲಾಗುತ್ತದೆ.
ಈ ಟ್ರೋಫಿ 8 ಪೌಂಡ್ ತೂಕದ 24 ಕ್ಯಾರೆಟ್ ಚಿನ್ನ ಲೇಪಿತ ಪ್ರತಿಮೆಯಾಗಿದ್ದು, ಆಸ್ಕರ್ ಪ್ರಶಸ್ತಿಗಳನ್ನು ತಯಾರಿಸುವ ಆರ್.ಎಸ್. ಔನ್ಸ್ ಕಂಪನಿಯೇ ಇದನ್ನು ತಯಾರಿಸುತ್ತದೆ.
ಈ ಪ್ರಶಸ್ತಿಯು ವಿಟ್ರಿಯೋ ರೆಟಿನಲ್ ಶಸ್ತ್ರಚಿಕಿತ್ಸಾ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಹಾಗೂ ಅಪೇಕ್ಷಿತ ಗೌರವವಾಗಿದೆ. ಡಾ. ಶ್ರೀನಿವಾಸ ಜೋಶಿ ಅವರು ಈ ಪ್ರಶಸ್ತಿಯನ್ನು ನಿರಂತರನವಾಗಿ 8ನೇ ಬಾರಿಗೆ ಮುಡಿಗೇರಿಸಿಕೊಂಡ ಖ್ಯಾತಿ ಪಡೆದಿದ್ದಾರೆ. ಜತೆಗೆ ಈ ಪ್ರಶಸ್ತಿಯನ್ನು ನಿರಂತರವಾಗಿ ಗೆದ್ದ ಏಕೈಕ ಭಾರತೀಯ ಹಾಗೂ ವಿಶ್ವದ ಮೂರನೇ ಶಸ್ತ್ರಚಿಕಿತ್ಸಕರೂ ಆಗಿದ್ದಾರೆ ಎಂಬುದು ವಿಶೇಷ.
ಈ ಸಮ್ಮೇಳನದಲ್ಲಿ ವಿಶ್ವದಾದ್ಯಂತ ರೆಟಿನಲ್ ಶಸ್ತ್ರಚಿಕಿತ್ಸಕರು ಭಾಗವಹಿಸಿದ್ದರು.