ಹುಬ್ಬಳ್ಳಿಯಲ್ಲಿ ಸೋಮವಾರ (Sri Satya Sai Seva) ಸುದ್ದಿಗೋಷ್ಠಿಯಲ್ಲಿ ಶ್ರೀ ಸತ್ಯ ಸಾಯಿ ಸೇವಾ ಒಕ್ಕೂಟದ ಧಾರವಾಡ ಜಿಲ್ಲಾಧ್ಯಕ್ಷ ನಾಗರಾಜ ಧಾರವಾಡಕರ ಮಾತನಾಡಿದರು. 
ಧಾರವಾಡ

ಶ್ರೀ ಸತ್ಯಸಾಯಿ (Sri Satya Sai Seva) ರಥ ಯಾತ್ರೆ

ಸಂತೋಷ ವೈದ್ಯ
ಹುಬ್ಬಳ್ಳಿ: ಶ್ರೀ ಸತ್ಯ ಸಾಯಿ ಬಾಬಾ (Sri Satya Sai Seva) ಅವರ ನೂರನೇ ಜನ್ಮ ದಿನದ ನಿಮಿತ್ತ ಆರಂಭಿಸಲಾಗಿರುವ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆ ಫೆ. 17ರಿಂದ 22ರವರೆಗೆ ಧಾರವಾಡ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ಶ್ರೀ ಸತ್ಯ ಸಾಯಿ ಸೇವಾ ಒಕ್ಕೂಟದ ಧಾರವಾಡ ಜಿಲ್ಲಾಧ್ಯಕ್ಷ ನಾಗರಾಜ ಧಾರವಾಡಕರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 17ರಂದು ಬೆಳಗ್ಗೆ 7 ಗಂಟೆಯಿಂದ ಹುಬ್ಬಳ್ಳಿ ತಾಲೂಕಿನ ಉಮಚಗಿ ದ್ಯಾಮವ್ವನ ಗುಡಿಯಿಂದ ಮೈಲಾರಲಿಂಗೇಶ್ವರ ದೇವಸ್ಥಾನ, ಸಂಜೆ 4 ಗಂಟೆಯಿಂದ ಹಳ್ಯಾಳ (ಕಡಪಟ್ಟಿ) ಮಾರುತಿ ದೇವಸ್ಥಾನದಿಂದ ಈರಣ್ಣ ಗುಡಿಯವರೆಗೆ ರಥಯಾತ್ರೆ ಸಂಚರಿಸಲಿದೆ. 18ರಂದು ಬೆಳಗ್ಗೆ 7 ಗಂಟೆಯಿಂದ ಬೊಮ್ಮಸಮುದ್ರ ಮಸೀದಿಯಿಂದ ಬೀರಲಿಂಗೇಶ್ವರ ಗುಡಿ, ಮಧ್ಯಾಹ್ನ 12 ಗಂಟೆಗೆ ವರೂರ, ಸಂಜೆ ಛಬ್ಬಿ ಮಾರುತಿ ಗುಡಿಯಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ ಎಂದರು.
19ರಂದು ಬೆಳಗ್ಗೆ 8ಗಂಟೆಗೆ ಹುಬ್ಬಳ್ಳಿ ಕಮರಿಪೇಟ ರಾಮಮಂದಿರದಿಂದ ರಥಯಾತ್ರೆ ಪ್ರಾರಂಭವಾಗಿ ಮಧ್ಯಾಹ್ನ 11 ಗಂಟೆಗೆ ರುದ್ರಾಕ್ಷಿ ಮಠ ತಲುಪಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ರುದ್ರಾಕ್ಷಿ ಮಠದಿಂದ ಆರಂಭಗೊಂಡು ಕೇಶ್ವಾಪುರ ಬನಶಂಕರಿ ಬಡಾವಣೆಯವರೆಗೆ ಸಾಗಿ, ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 20ರಂದು ಬೆಳಗ್ಗೆ 7ಗಂಟೆಗೆ ಹೊಸೂರಿನಿಂದ ಲಿಂಗರಾಜನಗರದವರೆಗೆ, ಸಂಜೆ 4 ಗಂಟೆಗೆ ನವನಗರ ಕ್ಯಾನ್ಸರ್ ಆಸ್ಪತ್ರೆಯಿಂದ ಆರಂಭಗೊಂಡು ರಾತ್ರಿ 9 ಗಂಟೆಗೆ ನವನಗರ ಶ್ರಿ ಸತ್ಯ ಸಾಯಿ ಸೇವಾ ಕ್ಷೇತ್ರ ತಲುಪಲಿದೆ ಎಂದು ತಿಳಿಸಿದರು.
21ರಂದು ಬೆಳಗ್ಗೆ 7 ಗಂಟೆಗೆ ಧಾರವಾಡ ದಯಾನಂದ ಆಶ್ರಮದಿಂದ ಸಪ್ತಾಪುರ ಬಾವಿವರೆಗೆ, ಸಂಜೆ 4 ಗಂಟೆಗೆ ಸಾಯಿ ಚರಣ ಕ್ಯಾಂಪಸ್​ನಿಂದ ಶಿರಡಿ ಸಾಯಿ ಮಂದಿರದವರೆಗೆ, 22ರಂದು ಬೆಳಗ್ಗೆ 7 ಗಂಟೆಗೆ ಮುದಿಹಾಳದಿಂದ ಸಪ್ತಾಪುರ ಸಾಯಿ ಚರಣ ಕ್ಯಾಂಪಸ್​ವರೆಗೆ ರಥಯಾತ್ರೆ ಸಂಚರಿಸಲಿದೆ. ಅಲ್ಲಿ ಸಂಜೆ 4 ಗಂಟೆಯಿಂದ ಸಭಾ ಕಾರ್ಯಕ್ರಮ, ಸತ್ಸಂಗ ಹಾಗೂ ವಿಶೇಷ ಸಂಗೀತ ಸಂಜೆ ಆಯೋಜಿಸಲಾಗಿದೆ ಎಂದು ವಿವರಿಸಿದರು.