ಕೆಲಗೇರಿಯ ಶ್ರೀ ಕಲ್ಮೇಶ್ವರ ದೇವರ ರಥೋತ್ಸವ 
ಧಾರವಾಡ

ಕೆಲಗೇರಿಯ ಶ್ರೀ ಕಲ್ಮೇಶ್ವರ ದೇವರ ರಥೋತ್ಸವ

ಧಾರವಾಡ: ಇಲ್ಲಿನ ಕೆಲಗೇರಿಯ ಶ್ರೀ ಕಲ್ಮೇಶ್ವರ ಹಾಗೂ ಗ್ರಾಮದೇವತೆಗಳ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಭಕ್ತರ ಜಯಘೋಷಗಳ ಮಧ್ಯೆ ಬಸವ ಜಯಂತಿ ದಿನವಾದ ಸೋಮವಾರ ಅದ್ಧೂರಿಯಿಂದ ಜರುಗಿತು. ಸಂಜೆ 5ಗಂಟೆಗೆ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಸುಳ್ಳದ ಪಂಚಗೃಹ ಹಿರೇಮಠದ ಶಿವಸಿದ್ಧ ರಾಮೇಶ್ವರರು ಉಪಸ್ಥಿತಿಯಲ್ಲಿ ರಥೋತ್ಸವ ಜರುಗಿತು. ಭಕ್ತರು ತೇರಿಗೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸರ್ಮಪಿಸಿದರು.
ಕಲ್ಮೇಶ್ವರ ದೇವಸ್ಥಾನದಿಂದ ಹಾದಿ ಬಸವಣ್ಣನವರೆಗೆ ಸಾಗಿದ ರಥ ದೇವಸ್ಥಾನಕ್ಕೆ ಮರಳಿತು. ಮಹಾಲಿಂಗೇಶ್ವರ ಚಂಡಿ, ಮಾಗಡಿಯ ಬ್ಯಾಂಡ್​ ಕಲಾ ತಂಡ, ದುರ್ಗಾದೇವಿ ಡೊಳ್ಳಿನ ಮಜಲಿನ ಸದ್ದಿಗೆ ಭಕ್ತರು ಜಯಘೋಷ ಕೂಗಿದರು. ರಾತ್ರಿ ಕೆಲಗೇರಿಯ ಅಪ್ಪಯ್ಯ ಚುಳಕಿಮಠ ನೇತೃತ್ವದಲ್ಲಿ ಸಿದ್ಧಲಿಂಗೇಶ್ವರ ನವತರುಣ ನಾಟ್ಯ ಸಂಘದಿಂದ "ಕರ್ತವ್ಯದ ಕಾಣಿಕೆ' ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.