spyss ಹುಬ್ಬಳ್ಳಿಯ ಡಾ. ರಾಧಾಕೃಷ್ಣನಗರ ಉದ್ಯಾನದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಸ್ವಚ್ಛತಾ ಅಭಿಯಾನ ನಡೆಸಲಾಯಿತು. 
ಧಾರವಾಡ

spyss ಪತಂಜಲಿ ಸಮಿತಿಯಿಂದ ಸ್ವಚ್ಛತಾ ಅಭಿಯಾನ

ಹುಬ್ಬಳ್ಳಿ: spyss ಇಲ್ಲಿಯ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ನಗರದ ಡಾ. ರಾಧಾಕೃಷ್ಣ ನಗರ ಉದ್ಯಾನದಲ್ಲಿ ಶುದ್ಧತೆ ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಜನರನ್ನು ಸ್ವಚ್ಛತೆಯೆಡೆಗೆ ಕರೆದೊಯ್ಯುವ ಉದ್ದೇಶದೊಂದಿಗೆ ಹಮ್ಮಿಕೊಂಡಿರುವ ಸಂಘಟಿತ ಕಾರ್ಯಕ್ರಮ ಇದಾಗಿದೆ. ನಿತ್ಯ ಜೀವನದಲ್ಲಿ ಹಾಗೂ ನಮ್ಮ ಪರಿಸರವನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ತಿಳಿವಳಿಕೆ ನೀಡಲಾಯಿತು.
ಸ್ವಚ್ಛತಾ ಅಭಿಯಾನವು ಸರ್ಕಾರದ ಕೆಲಸವಷ್ಟೇ ಅಲ್ಲ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಎಲ್ಲರೂ ಕೈಜೋಡಿಸಿದಾಗ ಮಾತ್ರ ಸ್ವಚ್ಛ ನಗರ ಕನಸು ನನಸಾಗಲು ಸಾಧ್ಯ ಎಂದು ನಾಗರಿಕರಿಗೆ ತಿಳಿಸಿಕೊಡಲಾಯಿತು.
ಉದ್ಯಾನ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶರದ್​ಕುಮಾರ ಎ, ಶ್ರೀದೇವಿ ಎ, ವೀಣಾ ಅಡಕೋಳಿ, ರೇಷ್ಮಾ ಗೌಡ, ಪ್ರೇಮಾ ಮುನವಳ್ಳಿ, ನಾಗರತ್ನಾ ಹಾವರಗಿ, ಎಫ್.ಎಸ್​. ತೆಂಬದಮನಿ, ರಶ್ಮಿ ಬಿಳ್ಳೂರ, ಸುನಂದಾ, ರೇಖಾ ರಮೇಶ, ಸೌಜನ್ಯ ಪೇಟಕರ, ಮಾಲಾ ಕಬನೂರ, ಶ್ವೇತಾ, ಯೋಗ ಬಂಧುಗಳು, ನಾರಿಶಕ್ತಿ ಮಹಿಳಾ ಮಂಡಳ ಸದಸ್ಯರು, ಇದ್ದರು.