ಹುಬ್ಬಳ್ಳಿ (Sports) ನವನಗರದ ಹಿರಿಯ ನಾಗರಿಕರ ಕಲ್ಯಾಣ ಟ್ರಸ್ಟ್ನಿಂದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಗೋವಿಂದಪ್ಪ ಗೌಡಪ್ಪಗೋಳ, ಶಿವಪ್ಪ ನೀರಾವರಿ, ಬಸವರಾಜ ಗಾಣಿಗೇರ, ಇತರರು ಇದ್ದರು.
ಹುಬ್ಬಳ್ಳಿ: ಹಿರಿಯರ (Sports) ನಾಗರಿಕರು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಚೈತನ್ಯಶೀಲರಾಗಬೇಕು. ಕ್ರೀಡೆಯಿಂದ ಉತ್ಸಾಹ ಇಮ್ಮಡಿಯಾಗುತ್ತದೆ. ಕ್ರಿಯಾಶೀಲರಾಗಿ ಆರೋಗ್ಯವಂತರಾಗುತ್ತಾರೆ ಎಂದು ನಿವೃತ್ತ ಅಧಿಕಾರಿ ಗೋವಿಂದಪ್ಪ ಗೌಡಪ್ಪಗೋಳ ಹೇಳಿದರು.
ನವನಗರದ ಹಿರಿಯ ನಾಗರಿಕರ ಕಲ್ಯಾಣ ಟ್ರಸ್ಟ್ (ಪ್ರೋಬಸ್ ಕ್ಲಬ್) ಹಿರಿಯ ನಾಗರಿಕರಿಗಾಗಿ ಏರ್ಪಡಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸೋಲು-ಗೆಲುವನ್ನು ಲೆಕ್ಕಿಸದೇ ಸ್ಪರ್ಧೆಗಳಲ್ಲಿ ಭಾಗವಹಿಸಿ ಇತರರೊಂದಿಗೆ ಬೆರೆಯಬೇಕು. ಹಿರಿಯ ನಾಗರಿಕರ ಸನ್ಮಾನಿಸುತ್ತಿರುವುದು ಒಳ್ಳೆಯ ಕೆಲಸವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ನಾಗರಿಕರ ಕಲ್ಯಾಣ ಟ್ರಸ್ಟ್ ಅಧ್ಯತ್ರ ಶಿವಪ್ಪ ನೀರಾವರಿ ಮಾತನಾಡಿ, ಹಿರಿಯರು ಶ್ರೇಷ್ಠ ಗ್ರಂಥವಿದ್ದಂತೆ. ಅವರ ಅನುಭವದ ಮಾತುಗಳು ಉಫನ್ಯಾಸವಿದ್ದಂತೆ. ಅವರು ಮಾತುಗಳನ್ನು ಗೌರವಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿರಿಯರು ಒಳ್ಳೆಯ ವಿಚಾರ ಮಾಡಬೇಕು. ತಮ್ಮ ಆರೋಗ್ಯದ ಬಗ್ಗೆ ತಾವೇ ಕಾಳಜಿ ವಹಿಸಬೇಕು. ಜಪ, ಧ್ಯಾನ, ಪ್ರಾಣಾಯಾಮಗಳಂತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಶಿವಪ್ಪ ಕರಡಿ ಪ್ರಾರ್ಥನೆ ಹಾಡಿದರು. ಬಸವರಾಜ ಗಾಣಿಗೇರ ನಿರೂಪಿಸಿದರು. ಫಕ್ಕೀರಪ್ಪ ಸೋಮಗೊಂಡ ವಂದಿಸಿದರು. ಶಿವಯೋಗಿ ಸುರೇಬಾನ, ಶಂಕ್ರಯ್ಯ ಗುರುಮಠ ಇದ್ದರು.