- ಕರ್ನಾಟಕದ ನ್ಯಾಯಾಂಗ ಇತಿಹಾಸದಲ್ಲಿಯೇ ಇದೇ ಮೊದಲು
- ಆಗಸ್ಟ್ 1ರಂದು ಈ ಹೊಸತನಕ್ಕೆ ಸಾಕ್ಷಿಯಾಗುತ್ತಿರುವ ಹೈಕೋರ್ಟ್ ಧಾರವಾಡ ಪೀಠ
ಧಾರವಾಡ: ಹೈಕೋರ್ಟ್ ಧಾರವಾಡ ಪೀಠವು ಕರ್ನಾಟಕದ ನ್ಯಾಯಾಂಗ ಇತಿಹಾಸದಲ್ಲಿಯೇ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಆಗಸ್ಟ್ 1ರಂದು ಒಟ್ಟು 10 ಮಹಿಳಾ ನ್ಯಾಯಮೂತಿರ್ಗಳ ನೇತೃತ್ವದ ಏಳು ನ್ಯಾಯಪೀಠಗಳು ಇಡೀ ದಿನದ ಕಲಾಪಗಳು ನಡೆಸಲಿವೆ.
ಈ ವಿಶೇಷ ಕಲಾಪವು ಮಹಿಳಾ ನ್ಯಾಯಮೂತಿರ್ಗಳ ನೇತೃತ್ವದಲ್ಲಿ ನಡೆಯುತ್ತಿರುವುದು ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲಾಗಲಿದೆ. ಪ್ರತ್ಯೇಕ ಮೂರು ವಿಭಾಗೀಯ ಪೀಠ ಹಾಗೂ ನಾಲ್ಕು ಏಕಸದಸ್ಯ ನ್ಯಾಯಪೀಠಗಳನ್ನು ರಚನೆ ಮಾಡಲಾಗಿದೆ. ಮಹಿಳಾ ಪ್ರಾತಿನಿಧ್ಯದ ಸಂಕೇತವಾಗಿ ಈ ಪ್ರಯತ್ನ ಮಾಡಲಾಗಿದೆ. ಕರ್ನಾಟಕ ಮುಖ್ಯ ನ್ಯಾಯಮೂತಿರ್ ವಿಭು ಬಖ್ರು ಅವರ ಆದೇಶದಂತೆ ಹೈಕೋರ್ಟ್ನ ರಿಜಿಸ್ಟ್ರಾರ್ (ನ್ಯಾಯಾಂಗ) ರೋಣ ವಾಸುದೇವ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ನ್ಯಾಯಮೂತಿರ್ ಅನು ಶಿವರಾಮನ್, ನ್ಯಾ. ಕೆ.ಜಿ. ಶಾಂತಿ ಅವರನ್ನೊಳಗೊಂಡ ಪೀಠವು ಎಲ್ಲ ವಿಭಾಗೀಯ ಪೀಠದದಲ್ಲಿ ರಿಟ್ ಮತ್ತು ಸಿವಿಲ್ ಪ್ರಕರಣಗಳ ಪ್ರಾಥಮಿಕ ವಿಚಾರಣೆ, ಅಜಿರ್ಗಳು, ಆದೇಶಗಳು ಹಾಗೂ ಅಂತಿಮ ವಿಚಾರಣೆಯನ್ನು ನಡೆಸಲಿವೆ. ಅಧಿಸೂಚನೆಯಂತೆ ಹಿರಿಯ ನ್ಯಾ. ಅನು ಸಿವರಾಮನ್, ನ್ಯಾ. ಕೆ.ಜಿ. ಶಾಂತಿ, ನ್ಯಾ. ಜ್ಯೂತಿ ಮೂಲಿಮನಿ, ನ್ಯಾ. ಪಿ. ಶ್ರೀಸುಧಾ, ನ್ಯಾ. ಲಲಿತಾ ಕೆನ್ನಾಗಂಟಿ ಹಾಗೂ ನ್ಯಾ. ಕೆ.ಎಸ್. ಹೇಮಲೇಖ ಅವರ ನೇತೃತ್ವದ ಮೂರು ವಿಭಾಗೀಯ ನ್ಯಾಯಪೀಠಗಳು ಕಲಾಪ ನಡೆಸಲಿವೆ.
ಮೂರು ವಿಭಾಗೀಯ ಪೀಠಗಳ ಜತೆಗೆ 4 ಏಕ ಸದಸ್ಯ ಪೀಠಗಳನ್ನು ರಚಿಸಲಾಗಿದೆ. ನ್ಯಾ. ಚೆಲ್ಲಕೂರು ಸುಮಲತಾ, ನ್ಯಾ. ತಾರಾವಿತಸ್ತ ಗಂಜು, ನ್ಯಾ. ಕೆ.ಬಿ. ಗೀತಾ, ನ್ಯಾ. ರಾಜೇಶ್ವರಿ ಹೆಗ್ಡೆ ಅವರ ನೇತೃತ್ವದಲ್ಲಿ ಕಲಾಪಗಳು ನಡೆಯಲಿವೆ.
ಮಹಿಳಾ ನ್ಯಾಯಮೂತಿರ್ಗಳ ನೇತೃತ್ವದಲ್ಲಿ ಹೈಕೋರ್ಟ್ನ ಮೂರು ವಿಭಾಗೀಯ ಪೀಠ ಹಾಗೂ ನಾಲ್ಕು ಏಕಸದಸ್ಯ ಪೀಠದಲ್ಲಿ ಒಟ್ಟು 420 ಪ್ರಕರಣಗಳ ವಿಚಾರಣೆ ನಡೆಯಲಿದೆ. ಪ್ರತಿಯೊಂದು ಪೀಠದಲ್ಲಿ ತಲಾ 60 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಲಿಂಗ ಸಮಾನತೆ ಪಾಲನೆಗಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೈಗೊಂಡಿರುವ ಈ ನಿರ್ಧಾರವು ಮಹಿಳಾ ಸಬಲೀಕರಣಕ್ಕೆ ಬುನಾದಿ ಹಾಕಿದೆ.
"
ಈ ಐತಿಹಾಸಿಕ ಕಲಾಪಗಳನ್ನು ನಡೆಸುವುದಕ್ಕೆ ಹೈಕೋರ್ಟ್ ಧಾರವಾಡ ಪೀಠವನ್ನು ಆಯ್ಕೆ ಮಾಡಿರುವುದು ವಿಕೇಂದ್ರೀಕರಣ ಮತ್ತು ಪ್ರಾದೇಶಿಕ ಪೀಠಗಳ ಸಾಂಸ್ಥಿಕ ಬಲವರ್ಧನೆ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ. ಮಹಿಳಾ ಪೀಠಗಳು ನ್ಯಾಯದಾನ ಪ್ರಕ್ರಿಯೆಗೆ ಹೆಚ್ಚು ಸಹಾನುಭೂತಿ, ಸೂಕ್ಷ್ಮ ಹಾಗೂ ಪ್ರಗತಿಪರ ದೃಷ್ಟಿಕೋನವನ್ನು ತರಲಿವೆ. ವಕೀಲರ ಸಂವು ಸಲ್ಲಿದ್ದ ಮನವಿಗೆ ಸ್ಪಂದಿಸಿ ಈ ಕಲಾಪಗಳನ್ನು ನಡೆಸಲು ಆದೇಶ ಹೊರಡಿಸಿದ ಕರ್ನಾಟಕ ಮುಖ್ಯ ನ್ಯಾಯಮೂತಿರ್ ವಿಭು ಬಖ್ರು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ.
— ಬಿ.ಡಿ. ಹಿರೇಮಠ, ಅಧ್ಯಕ್ಷ, ಹೈಕೋರ್ಟ್ ಧಾರವಾಡ ಪೀಠದ ವಕೀಲರ ಸಂಘ