patanjali ಗುರುಪೂರ್ಣಿಮೆ ಅಂಗವಾಗಿ ಹುಬ್ಬಳ್ಳಿಯ ಪತಂಜಲಿ ರಾಜ್ಯ ಕಾರ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಅವರ ನೇತೃತ್ವದಲ್ಲಿ ವಿಶೇಷ ಅಗ್ನಿಹೋತ್ರ ಅನುಷ್ಠಾನ ನಡೆಯಿತು. 
ಧಾರವಾಡ

ಪತಂಜಲಿಯಿಂದ ವಿಶೇಷ ಅಗ್ನಿಹೋತ್ರ ಅನುಷ್ಠಾನ patanjali

ಪ್ರಮುಖ ಮುಖ್ಯಾಂಶಗಳು

  • ಗುರುವಿನ ಆಶೀರ್ವಾದದಿಂದ ಮಾತ್ರ ಸಾರ್ಥಕತೆ : ಭವರಲಾಲ್ ಆರ್ಯ
  • ಗುರುವನ್ನು ಸ್ಮರಿಸುವಂತಹ ಶುಭ ದಿನ ಗುರು ಪೂರ್ಣಿಮೆ.
  • ಸನಾತನ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಗೌರವಿಸಬೇಕು.
ಹುಬ್ಬಳ್ಳಿ:
ಅಗ್ನಿಹೋತ್ರ ಅನುಷ್ಠಾನ ನೆರವೇರಿಸಿ ಮಾತನಾಡಿದ ಭರಲಾಲ್ ಆರ್ಯ, ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ, ಮಾನವ ಜನ್ಮಕ್ಕೆ ಸಾರ್ಥಕತೆ ಸಿಗಬೇಕೆಂದರೆ ಅದು ಒಬ್ಬ ಗುರುವಿನಿಂದ ಮಾತ್ರ ಸಾಧ್ಯ ಎಂದರು.
ತಾಯಿ, ತಂದೆ ನಮ್ಮ ಮೊದಲ ಗುರುಗಳು. ನಂತರ ಜೀವನದ ಗುರು ಸಿಗುವರು. ಗುರುವಿಗೆ ಯಾವುದೇ ಬೇಧ ಭಾವವಿರುವುದಿಲ್ಲ. ಗುರುವು ಎಲ್ಲವನ್ನೂ ಮೀರಿದವರು.
ಇಂತಹ ಗುರುವನ್ನು ಸ್ಮರಿಸುವಂತಹ ಶುಭ ದಿನ ಗುರು ಪೂರ್ಣಿಮೆ, ಗುರು ವಂದನಾ ದಿನ. ಈ ದಿನದಂದು ದುರ್ಗಣಗಳನ್ನು ತ್ಯಜಿಸಿ, ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಯುವ ಪೀಳಿಗೆಯು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ, ಗುರುವಿನ ಮೇಲಿನ ಗೌರವ ಕಡಿಮೆಯಾಗಿದೆ. ಗುರು ಪೂರ್ಣಿಮೆ, ಗುರು ವಂದನಾದಂತಹ ಭಾರತೀಯ ಸನಾತನ ಆಚರಣೆೆಗಳ ಬಗ್ಗೆ ವಿಶ್ವಾಸ ಇಲ್ಲದಂತಾಗಿದೆ. ಈ ಬೆಳವಣಿಗೆ ಸಮಾಜಕ್ಕೆ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ಭಾರತೀಯ ಸನಾತನ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಇದನ್ನು ಕಂಡು ಮುಂದಿನ ಪೀಳಿಗೆಯೂ ಅನುಕರಣೆ ಮಾಡುತ್ತದೆ ಎಂದರು.
ಕಿರಣ ಗುರೂಜಿ, ಬಾಬು ಲಾಲ್, ಮನೋಜ ಸಾಹು, ಮಂಜುಳಾ, ಸಂಗೀತಾ, ದಿವ್ಯ, ಗೀತಾ, ಸವಿತಾ, ಭಾರತಿ, ಬಸವರಾಜ, ವೀರೇಶ, ಅಕ್ಷಯ, ರೂಪಾ ಹಾಗೂ ಇತರರಿದ್ದರು.