SIR ಹುಬ್ಬಳ್ಳಿ ಮಾಧವ ನಗರದ ಬೂತ್ ನಂಬರ್ 21ರ ದರ್ಗಾ.
- ಬಿಜೆಪಿ ಬೂತ್ ಮಟ್ಟದ ಏಜೆಂಟ್, ಕಾರ್ಯಕರ್ತರನ್ನು ಕಂಡು ಪಲಾಯನಗೈದ ಬಿಎಲ್ಒ.
- ಬಿಎಲ್ಒ ರಾಯಚೂರ ಸ್ಥಳದಿಂದ ಪಲಾಯನ ಮಾಡಿದ್ದಾರೆ.
- ದರ್ಗಾದಲ್ಲಿ ಕುಳಿತು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿದ್ದರು.
SIR ದರ್ಗಾವೊಂದರಲ್ಲಿ ಕುಳಿತು ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದ್ದ ಬಿಎಲ್ಒ ಒಬ್ಬರು, ಬಿಜೆಪಿ ಕಾರ್ಯಕರ್ತರನ್ನು ಕಂಡೊಡನೆ ಪಲಾಯನ ಮಾಡಿದ ಘಟನೆ ಹುಬ್ಬಳ್ಳಿ ಮಾಧವ ನಗರದ ಬೂತ್ ನಂಬರ್ 21ರಲ್ಲಿ ಮಂಗಳವಾರ ನಡೆದಿದೆ.
ಮಧ್ಯಾಹ್ನ ಬಿಎಲ್ಒ ಅಮೀರಖಾನ ರಾಯಚೂರು ಎಂಬುವವರು ಮಾಧವನಗರದ ಮಾಸಾಬಿ ದರ್ಗಾದಲ್ಲಿ ಕುಳಿತು ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದ್ದರು.
ಕಳೆದ ಎರಡು ದಿನಗಳ ಹಿಂದೆಯೂ ಬಿಎಲ್ಒ ಅಮೀರಖಾನ ರಾಯಚೂರು ಅದೇ ದರ್ಗಾದಲ್ಲಿ ಕುಳಿತು ಎಸ್ಐಆರ್ ಪ್ರಕ್ರಿಯೆಯಲ್ಲಿ ತೊಡಗಿದ್ದರು.
ಆಗ, ಬಿಜೆಪಿಯ ಬೂತ್ ಲೆವೆಲ್ ಏಜೆಂಟ್ರು ಚುನಾವಣೆ ಆಯೋಗದ ನಿಯಮದಂತೆ ಕಾರ್ಯ ನಿರ್ವಹಿಸುವಂತೆ ತಾಕೀತು ಮಾಡಿದ್ದರು.
ಪ್ರತಿ ಮನೆಗೆ ಭೇಟಿ ನೀಡುವ ಮೂಲಕ ಎಸ್ಐಆರ್ ಕಾರ್ಯ ನಿರ್ವಹಿಸುವಂತೆ ಹೇಳಿದ್ದರು. ಆದರೂ, ಮಂಗಳವಾರವು ಸಹ ಅದೇ ದರ್ಗಾದಲ್ಲಿ ಕುಳಿತು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿದ್ದರು.
ಈ ಕುರಿತು ಮಾಹಿತಿ ಅರಿತ ಬಿಜೆಪಿಯ ಬೂತ ಮಟ್ಟದ ಏಜೆಂಟ್ರು ಹಾಗೂ ಕಾರ್ಯಕರ್ತರು, ದರ್ಗಾಕ್ಕೆ ತೆರಳಿದರು. ಬಿಜೆಪಿಯವರನ್ನು ನೋಡುತ್ತಲೇ ಬಿಎಲ್ಒ ರಾಯಚೂರ ಸ್ಥಳದಿಂದ ಪಲಾಯನ ಮಾಡಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಮಹೇಶ ಟೆಂಗಿನಕಾಯಿ, ದರ್ಗಾದಲ್ಲಿ ಕುಳಿತು ಎಸ್ಐಆರ್ ಪ್ರತಿಕ್ರಿಯೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ಮೇಲಾಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದೇನೆ. ಚುನಾವಣೆ ಆಯೋಗದ ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.