plumbers ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಗೌರವ ಅಧ್ಯಕ್ಷ ಡಾ. ಎಂ.ಆರ್. ಪಾಟೀಲ.
- ಗ್ಲಾಸ್ಹೌಸ್ನಲ್ಲಿ ಎರಡು ದಿನಗಳ ವಸ್ತು ಪ್ರದರ್ಶನ.
- ವಿವಿಧ ವಸ್ತುಗಳ ಪ್ರದರ್ಶನದ 42 ಮಳಿಗೆಗಳು ಇರಲಿವೆ.
- ಹಿರಿಯ ಪ್ಲಂಬರ್ಗಳನ್ನು ಸನ್ಮಾನಿಸಲಾಗುವದು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಗೌರವ ಅಧ್ಯಕ್ಷ ಡಾ. ಎಂ.ಆರ್. ಪಾಟೀಲ, ಕಳೆದ 25 ವರ್ಷಗಳಿಂದ ಈ ಸಂಸ್ಥೆ ಕಾರ್ಯರ್ನಿಹಿಸುತ್ತಿದೆ. ಸಂಸ್ಥೆಯ ಸದಸ್ಯರು ಹುಬ್ಬಳ್ಳಿ-ಧಾರವಾಡ ಹಾಗೂ ಸುತ್ತಲಿನ ಪ್ರದೇಶಗಳ ಜತೆಗೆ ರಾಜ್ಯದ ವಿವಿಧೆಡೆಯೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
26ರಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರಜತ ಮಹೋತ್ಸವವನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ವಸ್ತು ಪ್ರದರ್ಶನವನ್ನು ಉದ್ಘಾಟಿಸುವರು.
ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಎನ್.ಎಚ್. ಕೋನರಡ್ಡಿ, ಎಂ.ಆರ್. ಪಾಟೀಲ, ಪ್ರದೀಪ ಶೆಟ್ಟರ್, ಸಲೀಂ ಅಹ್ಮದ್, ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ ಹುಡಾ ಅಧ್ಯಕ್ಷ ಶಾಕೀರ ಸನದಿ ಹಾಗೂ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಏರ್ಪಡಿಸಿರುವ ವಸ್ತು ಪ್ರದರ್ಶನದಲ್ಲಿ ಪ್ಲಂಬಿಂಗ್ ವಸ್ತುಗಳು, ಪರಿಕರಗಳು, ಉಪಕರಣಗಳು, ಮಳೆ ನೀರು ಕೊಯ್ಲು, ನೀರಿನ ಮಿತ ಬಳಕೆಯ ಪರಿಕರಗಳು, ದ್ವಿಚಕ್ರ ವಾಹನಗಳ ಹಾಗೂ ಮನೆ ಹೂದೋಟದ ನೀರಾವರಿ ಉಪಕರಣಗಳು ಸೇರಿದಂತೆ ವಿವಿಧ ವಸ್ತುಗಳ ಪ್ರದರ್ಶನದ 42 ಮಳಿಗೆಗಳು ಇರಲಿವೆ ಎಂದರು.
ಪ್ಲಂಬರ್ಗಳ ಜೀವನಕ್ಕೆ ಸರ್ಕಾರದಿಂದ ಆರ್ಥಿಕ ಭದ್ರತೆ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಲಾಗುವುದು. ಹಿರಿಯ ಪ್ಲಂಬರ್ಗಳನ್ನು ಸನ್ಮಾನಿಸಲಾಗುವದು ಎಂದು ಹೇಳಿದರು.
ಸಂಘದ ಅಧ್ಯಕ್ಷ ಮಕಬೂಲಸಾಬ ಉಂಟವಾಲೆ, ಉಪಾಧ್ಯಕ್ಷ ರಾಜೇಂದ್ರ ಮಹಿಪತಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.