ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠಕ್ಕೆ siddarudha mathಬುಧವಾರ ಭೇಟಿ ನೀಡಿದ ಎಸ್‌ಬಿಐನ ಸಂಜಯ್‌ಕುಮಾರ ಝಾ, ಮಣಿಕಂಡನ್ ರಾಮಕೃಷ್ಣನ್, ನಾಗಸುಬ್ದಾರೆಡ್ಡಿ ಬಿ. ಅವರನ್ನು ಸನ್ಮಾನಿಸಲಾಯಿತು. 
ಧಾರವಾಡ

siddarudha math ಸಿದ್ಧಾರೂಢರ ಮಠಕ್ಕೆ ಎಸ್‌ಬಿಐ ವ್ಯವಸ್ಥಾಪಕರ ಭೇಟಿ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢರ ಮಠಕ್ಕೆ

siddarudha math

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಸಂಜಯ್‌ಕುಮಾರ ಝಾ, ಉಪ ಪ್ರಧಾನ ವ್ಯವಸ್ಥಾಪಕ ಮಣಿಕಂಡನ್ ರಾಮಕೃಷ್ಣನ್, ಪ್ರಾದೇಶಿಕ ವ್ಯವಸ್ಥಾಪಕ ನಾಗಸುಬ್ಬಾರೆಡ್ಡಿ ಬಿ. ಬುಧವಾರ ಭೇಟಿ ನೀಡಿದರು.

ಶ್ರೀ ಸಿದ್ಧಾರೂಢರು, ಶ್ರೀ ಗುರುನಾಥಾರೂಢರ ಗದ್ದುಗೆ ದರ್ಶನಾಶೀರ್ವಾದ ಪಡೆದ ನಂತರ, ಇವರೆಲ್ಲರನ್ನೂ ಶ್ರೀಮಠದ ಟ್ರಸ್ಟ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ಬ್ಯಾಂಕ್‌ನ ಸಿಎಸ್‌ಆರ್ ಅನುದಾನದಡಿ ದಾಸೋಹಕ್ಕೆ ಅಗತ್ಯವಿರುವ ಬೈಲರ್, ಕುಕರ್, ಕೋಲ್ಡ್ ಸ್ಟೋರೇಜ್ ನೀಡುವಂತೆ ಕಮಿಟಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಎಸ್‌ಬಿಐ ಸಿದ್ಧಾರೂಢ ನಗರ ಶಾಖೆಯ ವ್ಯವಸ್ಥಾಪಕ ಅಭಯ್‌ಕುಮಾರ. ಕಮಿಟಿ ಚೇರ್ಮನ್ ಬಾಳು ಮಗಜಿಕೊಂಡಿ, ಗೌರವ ಕಾರ್ಯದರ್ಶಿ ವಿನಾಯಕ ಘೋಡಕೆ, ಧರ್ಮದರ್ಶಿಗಳಾದ ಡಾ. ಗೋವಿಂದ ಮಣ್ಣೂರ, ಉದಯಕುಮಾರ ನಾಯ್ಕ, ಇತರರಿದ್ದರು.