ಹುಬ್ಬಳ್ಳಿ ಸಮೀಪದ siddarudha ಬೂದನಗುಡ್ಡದಲ್ಲಿ ಇತ್ತೀಚೆಗೆ ಭಜನಾ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. 
ಧಾರವಾಡ

siddarudha ಭಜನಾ ಪುಸ್ತಕ ಬಿಡುಗಡೆ

ಮರಿದೇವ ಹೂಗಾರ
ಹುಬ್ಬಳ್ಳಿ: ಆರೂಢ ಸತ್ಸಂಗ ಬಳಗದಿಂದ ಇಲ್ಲಿಯ ಶ್ರೀ ಸಿದ್ಧಾರೂಢ ಮಠದ siddarudha ಕೈಲಾಸ ಮಂಟಪದಲ್ಲಿ ಆಯೋಜಿಸಿದ್ದ 365 ದಿನಗಳ ನಿರಂತರ ‘ಕಥಾಮೃತ ಪಠಣ’ ಹಾಗೂ ಭಜನಾ ಕಾರ್ಯಕ್ರಮವು ಸಂಪನ್ನಗೊಂಡಿತು.
ಸಮೀಪದ ಬೂದನಗುಡ್ಡದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರೋಪದಲ್ಲಿ ಮಹಾಪ್ರಸಾದ ಮತ್ತು ಭಜನಾ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಜರುಗಿತು. ಗದಿಗೆಪ್ಪಗೌಡ ಭಾವಿಕಟ್ಟಿ ಅವರು ಪುಸ್ತಕ ಬಿಡುಗಡೆಗೊಳಿಸಿದರು.
ಸತ್ಸಂಗದ ಪ್ರಮುಖರಾದ ಗಂಗಾಧರ ಬಿರಾದರ, ಬಸವರಾಜ ಟೊಂಗಲಿ, ನಾಗರಾಜ ಭದ್ರಶೆಟ್ಟಿ, ಸದಾಶಿವ ಗದದ, ಮಲ್ಲೇಶಪ್ಪ ಕಾರಡಗಿ, ಬಸಯ್ಯ ಹಡಗಲಿಮಠ, ಶ್ರೀಕಾಂತ ಕಲಾದಗಿ, ಹನುಮಂತಪ್ಪ ದಾಸರ, ನಾಗರಾಜ ಸಂಗಳಕರ, ವೀರಭದ್ರಪ್ಪ ಕೆರೂರ, ಆನಂದ ರೆಡ್ಡಿ, ಭೀಮಣ್ಣ ನಾರಾಯಣಪುರ, ವಿಜಯ ಸೂರ್ಯವಂಶಿ, ವೈ.ಎಸ್. ಗದಗ, ಬಸವರಾಜ ಗೊಂಬಿ, ಈರಪ್ಪ ನವಲಗುಂದ, ಬಸವರಾಜ ಹೂಗಾರ, ಹನುಮಂತಪ್ಪ ದೊಡ್ಡಮನಿ, ಅನಸೂಯ ನವಲಗುಂದ, ಕಮಲಾ ಕುರಿಯವರ, ನಿವೇದಿತಾ ನಿಜಗುಲಿ, ಸರಸ್ವತಿ ಕೊನಜಿ, ಶಾರದಾ ಪಾಸ್ತೆ ಇತರರಿದ್ದರು.