siddarudh ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿ ಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್​. ಭಾರತಿ ಅವರನ್ನು ಟ್ರಸ್ಟ್​ ಕಮಿಟಿಯಿಂದ ಅಭಿನಂದಿಸಲಾಯಿತು. ಶ್ರೀ ದಯಾನಂದ ಸರಸ್ವತಿ ಸ್ವಾಮೀಜಿ, ಬಾಳು ಮಗಜಿಕೊಂಡಿ, ಚನ್ನವಿರ ಮುಂಗುರವಾಡಿ, ಶಾಮಾನಂದ ಪೂಜೇರಿ, ಡಾ. ಗೋವಿಂದ ಮಣ್ಣೂರ, ಇತರರು ಇದ್ದರು. 
ಧಾರವಾಡ

siddarudh ಭಕ್ತರ ಅನುಕೂಲಕ್ಕೆ ಸೌಲಭ್ಯ ಕಲ್ಪಿಸಿ

ಪ್ರಮುಖ ಮುಖ್ಯಾಂಶಗಳು

  • ಸಿದ್ಧಾರೂಢಮಠ ಆಡಳಿತಾಧಿಕಾರಿ ಸನ್ಮಾನ
  • ಶಿವಾವತಾರಿ ನನೆದರೆ ಕಷ್ಟ ಮಾಯ
ಹುಬ್ಬಳ್ಳಿ: siddarudh ಶಿವಾವತಾರಿ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದಲ್ಲಿ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್​. ಭಾರತಿ ಅವರನ್ನು ಶ್ರೀಮಠದ ಟ್ರಸ್ಟ್​ ಪರವಾಗಿ ಇತ್ತೀಚೆಗೆ ಅಭಿನಂದಿಸಲಾಯಿತು.
ಶ್ರೀಮಠದಿಂದ ಭಕ್ತರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ಸೌಕರ್ಯಗಳನ್ನು ಟ್ರಸ್ಟ್​ ಕಮಿಟಿಯು ಮಾಡಿಕೊಡುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಕಾಡರಕೊಪ್ಪದ ಸದ್ಗುರು ಶ್ರೀ ದಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್​ ಕಮಿಟಿ ಚೇರ್ಮನ್​ ಬಾಳು ಮಗಜಿಕೊಂಡಿ ಅಧ್ಯಕ್ಷತೆ ವಹಿಸಿದ್ದರು. ಧರ್ಮದರ್ಶಿ ಶಾಮಾನಂದ ಪೂಜೇರಿ ಪ್ರಾಸ್ತಾವಿಕ ಮಾತನಾಡಿದರು.
ಧರ್ಮದರ್ಶಿಗಳಾದ ಅಂದಾನಪ್ಪ ಚಾಕಲಬ್ಬಿ, ಚನ್ನವಿರ ಮುಂಗುರವಾಡಿ, ಉದಯಕುಮಾರ ನಾಯಕ, ಕೆ.ಎಲ್​. ಪಾಟೀಲ, ಡಾ. ಗೋವಿಂದ ಮಣ್ಣೂರ, ವಸಂತ ಸಾಲಗಟ್ಟಿ, ಬಸವರಾಜ ಕಲ್ಯಾಣಶೆಟ್ಟರ, ವಿ.ಡಿ. ಕಾಮರಡ್ಡಿ, ಗೌರವ ಕಾರ್ಯದರ್ಶಿ ವಿನಾಯಕ ಘೋಡಕೆ, ಸದಾನಂದ ಬೆಂಡಿಗೇರಿ ಉಪಸ್ಥಿತರಿದ್ದರು.