ಹುಬ್ಬಳ್ಳಿಯಲ್ಲಿ ಭಾನುವಾರ (Short literature) ಆಯೋಜಿಸಿದ್ದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಹುಬ್ಬಳ್ಳಿ ತಾಲೂಕ ಮಟ್ಟದ 14ನೇ ಸಮ್ಮೇಳನದಲ್ಲಿ ಉಣಕಲ್ ಸಿದ್ದಪ್ಪಜ್ಜನ ಹೊಸಮಠದ ಅಧ್ಯಕ್ಷ ರಾಜಣ್ಣ ಕೊರವಿ ಅವರಿಗೆ ಅಭಿನವ ಚಾವುಂಡರಾಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶರಣಬಸವ ಚೋಳಿನ, ಡಾ. ಶಾಂತಣ್ಣ ಕಡಿವಾಲ, ಕೃಷ್ಣಮೂರ್ತಿ ಕುಲಕರ್ಣಿ, ಪ್ರಭಾವತಿ ಮುತ್ತಿನ, ಇತರರು ಇದ್ದರು. 
ಧಾರವಾಡ

ಚುಟುಕು ಸಾಹಿತ್ಯ (Short literature) ಇಂದು ಅನಿವಾರ್ಯ

ಸಂತೋಷ ವೈದ್ಯ
ಹುಬ್ಬಳ್ಳಿ: ಸಮಯದ ಕೊರತೆಯ (Short literature) ಕಾರಣಕ್ಕೆ ಕಥೆ, ಕಾದಂಬರಿ, ಬೃಹತ್ ಗ್ರಂಥಗಳನ್ನು ಓದುವಷ್ಟು ವ್ಯವಧಾನ ಯಾರಿಗೂ ಇಲ್ಲವಾಗಿದೆ. ಆದ್ದರಿಂದ ನೇರ ನುಡಿಯ ಚುಟುಕು ಸಾಹಿತ್ಯ ಇಂದು ಅಗತ್ಯ ಅನಿವಾರ್ಯ ಎಂದು ಧಾರವಾಡ ಆಕಾಶವಾಣಿ ನಿಲಯ ನಿರ್ದೇಶಕ ಶರಣಬಸವ ಚೋಳಿನ ಹೇಳಿದರು.
ನಗರದ ಉಣಕಲ್ ಸಿದ್ದಪ್ಪಜ್ಜನ ಹೊಸಮಠ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಹುಬ್ಬಳ್ಳಿ ತಾಲೂಕ ಮಟ್ಟದ 14ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಜನಪದ ತ್ರಿಪದಿಯ ಮೂಲದ ಚುಟುಕು ಸಾಹಿತ್ಯ ಇಂದು ಶ್ರೀಮಂತ ಸಾಹಿತ್ಯವಾಗಿದೆ. ಉಣಕಲ್ಲ ಗ್ರಾಮಾಂತರ ಪ್ರದೇಶವಾದರೂ ಧಾರ್ವಿುಕ ವಾತಾವರಣದಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಗಮನಾರ್ಹ ಸಂಗತಿಯಾಗಿದೆ ಎಂದರು.
ಅಭಿನವ ಚಾವುಂಡರಾಯ ಪ್ರಶಸ್ತಿ ಸ್ವೀಕರಿಸಿದ ಸಿದ್ದಪ್ಪಜ್ಜನ ಹೊಸಮಠದ ಅಧ್ಯಕ್ಷ ರಾಜಣ್ಣ ಕೊರವಿ ಮಾತನಾಡಿ, ಕಚುಸಾಪ ಸಾಹಿತ್ಯ ಕಾರ್ಯಕ್ರಮ ನೀಡಲು ದೇವಸ್ಥಾನ ಅವಕಾಶ ನೀಡುತ್ತದೆ ಎಂದು ಹೇಳಿದರು.
ಸರ್ವಾಧ್ಯಕ್ಷೆ ಪ್ರಭಾವತಿ ಮುತ್ತಿನ ಗೌರವ ಸ್ವೀಕರಿಸಿ ಮಾತನಾಡಿದರು. ನಿಕಟ ಪೂರ್ವ ಸರ್ವಾಧ್ಯಕ್ಷೆ ಶಾಂತಾ ನಾಡಗೀರ ಅಧಿಕಾರ ಹಸ್ತಾಂತರ ಮಾಡಿ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಡಾ.ರಮೇಶ ಮಹಾದೇವಪ್ಪ, ಹಿರಿಯರಾದ ಸಿದ್ದನಗೌಡ ಕಾಮಧೇನು, ಚನ್ನಬಸಪ್ಪ ಧಾರವಾಡಶೆಟ್ರು, ಸಮಿತಿ ಸದಸ್ಯರಾದ ರಾಮಣ್ಣ ಪದ್ಮಣ್ಣವರ, ಗುರುಸಿದ್ದಪ್ಪ ಮೆಣಸಿನಕಾಯಿ, ವಿ.ಜಿ.ಪಾಟೀಲ, ಎಸ್.ಐ.ನೇಕಾರ, ಗುರುಸಿದ್ದಪ್ಪ ಬೆಂಗೇರಿ ಅವರನ್ನು ಗೌರವಿಸಲಾಯಿತು.
ಜಿಲ್ಲಾಧ್ಯಕ್ಷ ಡಾ.ಶಾಂತಣ್ಣ ಕಡಿವಾಲ ಸ್ವಾಗತಿಸಿದರು. ಮಹಿಳಾ ಘಟಕದ ವಂದನಾ ರಮೇಶ ನಾಡಗೀತೆ ಹಾಡಿದರು. ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಅಧ್ಯಕ್ಷ ಮೃತ್ಯುಂಜಯ ಮಟ್ಟಿ ವಂದಿಸಿದರು.