worker ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಶಿಯ ರೈತ ಮುಖಂಡ ಪರಮೇಶ್ವರಪ್ಪ ನಾಯ್ಕರ.
- ಸಂತ್ರಸ್ತನಿಗೆ ಪರಿಹಾರ ನೀಡಲು ರೈತ ಮುಖಂಡರ ಆಗ್ರಹ.
- ಗುತ್ತಿಗೆದಾರ ಫೋನ್ ರಿಸೀವ್ ಮಾಡುತ್ತಿಲ್ಲ.
- ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು.
ಹುಬ್ಬಳ್ಳಿ:
ಮಂಜುನಾಥ ಶಿಶುನಾಳ ಅವರ ದೇಹ ಶೇ. 70ರಷ್ಟು ಸುಟ್ಟಿದೆ. ಈಗಾಗಲೇ ಆತನ ಎರಡೂ ಮುಂಗೈ ಹಾಗೂ ಒಂದು ಕಾಲನ್ನು ವೈದ್ಯರು ಕತ್ತರಿಸಿದ್ದಾರೆ ಎಂದು ತಿಳಿಸಿದರು.
28 ವರ್ಷದ ಮಂಜುನಾಥನಿಗೆ ಒಬ್ಬ ಪುತ್ರನಿದ್ದಾನೆ. ಆತನ ಪತ್ನಿ ಗರ್ಭಿಣಿಯಾಗಿದ್ದು, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು.
ಬಣ್ಣ ಹಚ್ಚುತ್ತಿದ್ದ ನವಲಗುಂದ ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಮುಂಜಾಗೃತೆ ಸೌಲಭ್ಯಗಳು ಇರಲಿಲ್ಲ. ಜೋತಾಡುತ್ತಿದ್ದ ವಿದ್ಯುತ್ ವೈಯರ್ ಅನ್ನು ಪೈಪ್ಲೈನ್ನಲ್ಲಿ ಹಾಕಿ, ವಿದ್ಯುತ್ ಕಡಿತಗೊಳಿಸಿದ ನಂತರವಷ್ಟೇ ಬಣ್ಣ ಹಚ್ಚುವುದಾಗಿ ಕೆಲಸಗಾರರು ಹೇಳಿದ್ದರು.
ಗುತ್ತಿಗೆದಾರರು ಸಹ ವಿದ್ಯುತ್ ಕಡಿತಗೊಳಿಸುವುದಾಗಿ ಹೇಳಿದ್ದರು. ಆದರೆ, ಕಡಿತಗೊಳಿಸದ ಕಾರಣ ಮಂಜುನಾಥ ವಿದ್ಯುತ್ ಸಂಪರ್ಕಕ್ಕೆ ಒಳಗಾಗಿದ್ದಾನೆ.
ಇದೀಗ ಗುತ್ತಿಗೆದಾರರ ಫೋನ್ ರಿಸೀವ್ ಮಾಡುತ್ತಿಲ್ಲ. ದೀಪಕ ಎಂಬ ಸುಪರ್ವೈಸರ್ ಅವರು ಸಹ ಒಂದು ದಿನ ಕೆಎಂಸಿಆರ್ಐಗೆ ಬಂದು, ಭೇಟಿ ನೀಡಿ ಹೋದರು. ಗಾಯಾಳು ಮಂಜುನಾಥ ಗಂಭೀರ ಸ್ಥಿತಿಯಲ್ಲಿ ಇದ್ದಾನೆ ಎಂದು ತಿಳಿಸಿದರು.
ಯಾವುದೇ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಕೆಎಂಸಿಆರ್ಐಗೆ ಭೇಟಿ ನೀಡಿ, ಮಂಜುನಾಥನ ಆರೋಗ್ಯ ವಿಚಾರಿಸಿಲ್ಲ.
ಸರ್ಕಾರ ತಕ್ಷಣ ಆತನ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವ ಜತೆಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು ಹಾಗೂ ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಅರ್ಜುನ ಆಡಿನ, ಬಸವರಾಜ ವಿಜಾಪುರ, ಪರಶುರಾಮ ಹೊಸೂರ, ಸಿದ್ದಪ್ಪ ಗಜೇಂದ್ರಗಡ, ಪ್ರವೀಣ ಕಲಾಲ ಸುದ್ದಿಗೋಷ್ಠಿಯಲ್ಲಿ ಇದ್ದರು.