ತುಳಜಾಭವಾನಿ ನವನಗರ. 
ಧಾರವಾಡ

ನವನಗರದಲ್ಲಿ ಶಾರದೀಯ ನವರಾತ್ರಿ ಮಹೋತ್ಸವ

ತುಳಜಾಭವಾನಿ ದೇವಸ್ಥಾನದಲ್ಲಿ ಆಯೋಜನೆ

ಹುಬ್ಬಳ್ಳಿ: ಇಲ್ಲಿಯ ನವನಗರ ಗಂಗಾಧರನಗರದ ಭಾವಸಾರ ಕ್ಷತ್ರೀಯ ಸಮಾಜ ಟ್ರಸ್ಟ್​ ವತಿಯಿಂದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಶಾರದೀಯ ನವರಾತ್ರಿ ಮಹೋತ್ಸವವನ್ನು ಅ. 11ರಿಂದ ಏರ್ಪಡಿಸಲಾಗಿದೆ.

ಅ. 11ರಂದು ಬೆಳಗ್ಗೆ ದೇವಸ್ಥಾನದಲ್ಲಿ ಘಟಸ್ಥಾಪನಾ, ಸಂಜೆ 8ಕ್ಕೆ ಮಂಗಳಾರತಿ ನಡೆಯಲಿದೆ. ಸಂಜೆ 7ಕ್ಕೆ ಶಾಸಕ ಅರವಿಂದ ಬೆಲ್ಲದ ದಸರಾ ಹಬ್ಬಕ್ಕೆ ಚಾಲನೆ ನೀಡುವರು.

ಅ. 12ರಂದು ಸಂಜೆ 4.30ಕ್ಕೆ ಭಾವಸಾರ ಕ್ಷತ್ರೀಯ ಮಹಿಳಾ ಮಂಡಳದಿಂದ ಭಕ್ತೀಗಿತೆ, ಶೋಭಾ ಜತ್ತಿ ಹಾಗೂ ಸಂಗಡಿಗರಿಂದ ದುರ್ಗಾ ಸಪ್ತಶತಿ ಪಠಣ ನಡೆಯಲಿದೆ.

ಅ. 13ರಂದು ಸಂಜೆ 4ಕ್ಕೆ ವಿಭಾವರಿ ಭಜನಾ ಮಂಡಳಿ, ಗೀತಾ ಮಾನೆ ಹಾಗೂ ಸಂಗಡಿಗರು, ಪವಮಾನ ಭಜನಾ ಮಂಡಳಿಯ ಶೈಲಜಾ ಕುಲಕರ್ಣಿ ಹಾಗೂ ಇತರರು, ಗಾಯತ್ರಿ ಭಜನಾ ಮಂಡಳಿಯ ಲಕ್ಷ್ಮೀ ಮೋರೆ ಸಂಗಡಿಗರು ಭಜನೆ, ಭಕ್ತೀಗಿತೆ ನಡೆಸಿ ಕೊಡುವರು.

ಅ. 18ರ ವರೆಗೆ ನಿತ್ಯ ಸಂಜೆ ವಿವಿಧ ಮಹಿಳಾ ಮಂಡಳದವರಿಂದ ಭಜನೆ, ಭಕ್ತೀಗಿತೆ ಕಾರ್ಯಕ್ರಮ ನಡೆಯಲಿವೆ.

ಅ. 19ರಂದು ಮಹಾನವಮಿ, ಪೂಜಾರಾಧನೆ, ಆಯುಧ ಪೂಜೆ ನಡೆಯಲಿದೆ. ಅ. 20ರಂದು ವಿಜಯ ದಶಮಿ, ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸಂಜೆ 5ಕ್ಕೆ ಪಲ್ಲಕ್ಕಿ ಉತ್ಸವ ಮುರ್ತಿ ಸಮೇತ ಬನ್ನಿ ಮಂಟಪದಲ್ಲಿ ಶಮಿ ಪೂಜನ ದೇವಸ್ಥಾನದಲ್ಲಿ ದಸರಾ ಉತ್ಸವ ನಡೆಯಲಿದೆ. ಸಂಜೆ 7ಕ್ಕೆ ದಾಂಡಿಯಾ, ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳಿಂದ ವೇಷಭೂಷಣ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.