shantiniketan ಹುಬ್ಬಳ್ಳಿಯ ಎಸ್ಜೆಆರ್ವಿಪಿ ಮಂಡಳಿಯ ಶಾಲೆಯಲ್ಲಿ ಮಂಗಳವಾರ ಆಚಾರ್ಯ ಭಗವಂತ ಪದ್ಮಶ್ರೀ ಶ್ರೀಮದ್ ವಿಜಯ ನಿತ್ಯಾನಂದ ಸೂರೀಶ್ವರಜೀ ಮಹಾರಾಜರು ಆಶೀರ್ವಚನ ನೀಡಿದರು. ಭವರಲಾಲ್ ಸಿ. ಜೈನ್, ಭರತ ಭಂಡಾರಿ, ಮಹೇಂದ್ರಕುಮಾರ ಪಾಲಗೋತಾ, ಪುರಾಣಕುಮಾರ ನಹಾಟಾ, ಪ್ರವೇಶ ಕೊಠಾರಿ, ಇತರರು ಇದ್ದರು.
- ಶ್ರೀವಿಜಯ ನಿತ್ಯಾನಂದ ಸೂರೀಶ್ವರಜೀ ಸ್ವಾಮೀಜಿ ಆಶೀರ್ವಚನ
- ಎಸ್ಜೆಆರ್ವಿಪಿ ಮಂಡಳಿಯ ಶಿಕ್ಷಣ ಸಂಸ್ಥೆಗೆ ಭೇಟಿ
ಹುಬ್ಬಳ್ಳಿ: shantiniketan ಇಲ್ಲಿಯ ಎಸ್ಜೆಆರ್ವಿಪಿ ಮಂಡಳಿಯ ಶಿಕ್ಷಣ ಸಂಸ್ಥೆಗೆ ಮಂಗಳವಾರ ಭೇಟಿ ನೀಡಿದ ಪರಮಪೂಜ್ಯ ಗಚ್ಛಾಧಿಪತಿ ಆಚಾರ್ಯ ಭಗವಂತ ಪದ್ಮಶ್ರೀ ಶ್ರೀಮದ್ ವಿಜಯ ನಿತ್ಯಾನಂದ ಸೂರೀಶ್ವರಜೀ ಮಹಾರಾಜ ಅವರು ಆಶೀರ್ವಚನ ನೀಡಿದರು.
ಪ್ರತಿಯೊಬ್ಬ ಶಿಕ್ಷಕ ಮತ್ತು ಸಿಬ್ಬಂದಿ ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆ, ನಿಷ್ಠೆ, ವಿನಯ, ಸೇವಾಭಾವ ಹಾಗೂ ಶಿಸ್ತಿನಿಂದ ನಿರ್ವಹಿಸಿ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು. ವಿದ್ಯಾರ್ಥಿಗಳಿಗೆ ಕೇವಲ ಪಠ್ಯಾಧಾರಿತ ಜ್ಞಾನವಷ್ಟೇ ಅಲ್ಲದೆ ಪ್ರಾಯೋಗಿಕ ಜ್ಞಾನ, ದೈವಿಕ ಮೌಲ್ಯಗಳು, ಆಧ್ಯಾತ್ಮಿಕ ಚಿಂತನೆ, ನೈತಿಕ ಶಿಕ್ಷಣ, ಮಾನವೀಯತೆ, ಭಾರತೀಯ ಸಂಸತಿ, ಜೀವನ ಕೌಶಲಗಳು ಹಾಗೂ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಅಗತ್ಯವಾದ ಮೌಲ್ಯಗಳನ್ನು ಬೋಧಿಸುವುದು ಶಿಕ್ಷಕರ ಪವಿತ್ರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಶಿಕ್ಷಕರು ಸಮಾಜದ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು ಎಂದು ಬಣ್ಣಿಸಿದ ಸ್ವಾಮೀಜಿ, ಇಂತಹ ಸಮಗ್ರ ಶಿಕ್ಷಣ ನೀಡುವ ಸಂಸ್ಥೆಯು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ, ಉತ್ತಮ ನಾಯಕರುಗಳನ್ನಾಗಿ ಹಾಗೂ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ ಎಂದು ಹೇಳಿದರು.
ಆಡಳಿತ ಮಂಡಳಿಯು ಆಚಾರ್ಯರ ಆಗಮನವನ್ನು ಐತಿಹಾಸಿಕ ಹಾಗೂ ಆಧ್ಯಾತ್ಮಿಕವಾಗಿ ಅತ್ಯಂತ ಮಹತ್ವದ ಕ್ಷಣವೆಂದು ಪರಿಗಣಿಸಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿತು. ಸಂಸ್ಥೆಯ ಆವರಣವು ಭಕ್ತಿ, ಶಾಂತಿ ಹಾಗೂ ಆಧ್ಯಾತ್ಮಿಕ ಉತ್ಸಾಹದಿಂದ ಕಂಗೊಳಿಸಿತು.