sha award ಬೆಂಗಳೂರಿನಲ್ಲಿ ಡಾ. ವೆಂಕಟರಾಮ ಕಟ್ಟಿ ಅವರಿಗೆ ಎಸ್​.ಎನ್​. ಷಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ಧಾರವಾಡ

sha award ಡಾ. ವೆಂಕಟರಾಮ ಕಟ್ಟಿ ಅವರಿಗೆ ಪ್ರಶಸ್ತಿ

ಹುಬ್ಬಳ್ಳಿ: sha award ಇಲ್ಲಿಯ ಜಯಪ್ರಿಯ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಡಾ. ವೆಂಕಟರಾಮ ಕಟ್ಟಿ ಅವರಿಗೆ ಈ ಬಾರಿಯ ಎಸ್​.ಎನ್​. ಷಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ, ವಿಶೇಷ ಗಮನ ನೀಡಿ ಸರ್ವೇ ಜನಃ ಸುಖಿನೋ ಭವಂತು ಆಶಯದೊಂದಿಗೆ ಕಣ್ಣುಗಳಿಗೆ ಸಂಬಂಧಿಸಿದ ಸಂಪೂರ್ಣ ಸೇವೆಯನ್ನು ಜಯಪ್ರಿಯದಲ್ಲಿ ಉಚಿತವಾಗಿ ನೀಡಲಾಗುತ್ತಿದೆ.
ಈ ಮೂಲಕ ಸಮಾಜದ ಹಿತ ಕಾಯುವ ಜಯಪ್ರಿಯಾ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರ ನಿಸ್ವಾರ್ಥ ಸೇವೆ ಗುರುತಿಸಿ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಾರ್ಷಿಕ ಸಮ್ಮೇಳನದಲ್ಲಿ ಡಾ. ಕಟ್ಟಿ ಅವರಿಗೆ ಪ್ರಶಸ್ತಿ ನೀಡಲಾಯಿತು.
ಆರ್ಥಿಕವಾಗಿ ಹಿಂದುಳಿದ ಯಾವ ವ್ಯಕ್ತಿಯೂ ದೃಷ್ಟಿ ಸಮಸ್ಯೆಯಿಂದ ಬಳಲಬಾರದು ಹಾಗೂ ಆ ಮೂಲಕ ಆರೋಗ್ಯಯುತ ಸಮಾಜವನ್ನು ಕಟ್ಟುವ ಕನಸು ಗುರಿ ಹೊಂದಿದ್ದು, ಈ ಪ್ರಶಸ್ತಿಯು ಇದಕ್ಕೆ ಪ್ರೇರಣೆ ನೀಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹುಬ್ಬಳ್ಳಿ ಹಾಗೂ ಸುತ್ತಲಿನ ಹಲವು ಗ್ರಾಮಗಳಲ್ಲಿ ಉಚಿತ ಶಿಬಿರ ಮಾಡುವ ಮೂಲಕ ನೇತ್ರ ತಪಾಸಣೆ ಮಾಡಿದ್ದಾರೆ. ಅನೇಕ ಜನರಿಗೆ ದೃಷ್ಟಿ ನೀಡಿದ್ದಾರೆ.