senior citizen ಹುಬ್ಬಳ್ಳಿಯ ವಿದ್ಯಾನಗರ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ. ಕ್ರಾಂತಿಕಿರಣ, ಎಂ.ಕೆ. ನಾಯ್ಕರ್, ಪ್ರೊ. ಕೆ.ಎಸ್. ಕೌಜಲಗಿ, ಎಸ್.ಟಿ. ಭೈರಪ್ಪನವರ, ಸುಭಾಶ್ಚಂದ್ರ ಛತ್ರದ, ಇತರರು ಇದ್ದರು.
- ಹಿರಿಯ ನಾಗರಿಕರಿಗೆ ಡಾ. ಕ್ರಾಂತಿಕಿರಣ ಸಲಹೆ
- ವಾರದ ಅತಿಥಿ ಕಾರ್ಯಕ್ರಮ
ಇಲ್ಲಿಯ ವಿದ್ಯಾನಗರ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಭಾನುವಾರ ಹಮ್ಮಿಕೊಂಡಿದ್ದ "ವಾರದ ಅತಿಥಿ' ಕಾರ್ಯಕ್ರಮದಲ್ಲಿ "ವೃದ್ಧಾಪ್ಯದಲ್ಲಿ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಗಳು' ಕುರಿತು ಅವರು ಉಪನ್ಯಾಸ ನೀಡಿದರು.
ವೃದ್ಧಾಪ್ಯದೊಂದಿಗೆ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದಲ್ಲಿ ಕ್ರಮೇಣ ಇಳಿಕೆಯಾಗಲಿದ್ದು, ರೋಗ ನಿರೋಧಕ ಶಕ್ತಿ ಕುಂಟಿತಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಪೌಷ್ಟಿಕ ಆಹಾರ, ನಿಯಮಿತ ವ್ಯಾಯಾಮ, ನಡಿಗೆ ಇವುಗಳನ್ನು ರೂಢಿಸಿಕೊಳ್ಳುವುದು ಅವಶ್ಯ ಎಂದರು.
ಮಾನಸಿಕ ಆರೋಗ್ಯ ಸಹ ವಯಸ್ಸಾದಂತೆ ಕ್ಷೀಣಿಸುತ್ತದೆ. ಇತ್ತೀಚಿನ ದಿನಗಳಲ್ಲಿ 60 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಶೇ. 15ರಷ್ಟು ಜನರು ಕನಿಷ್ಠ ಒಂದಾದರೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ವೃದ್ದಾಪ್ಯದಲ್ಲಿ ಒಂಟಿತನದಿಂದ ಕಾಡುವ ಖಿನ್ನತೆ ಮತ್ತು ಆತಂಕ ನಿವಾರಿಸಲು ಸಮಾಜಮುಖಿ ಕಾರ್ಯಗಳತ್ತ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.