ಧಾರವಾಡ: ಜಿಲ್ಲೆಯಲ್ಲಿ ಸ್ವಯಂ ಗಣತಿ ಕಾರ್ಯವು ಏ. 1ರಿಂದ 15ರವರೆಗೆ ಜರುಗಲಿದೆ. ಸಾರ್ವಜನಿಕರು ತಮ್ಮ ಮೊಬೆಲ್ ಮೂಲಕ ಸ್ವಯಂ ಗಣತಿಯನ್ನು ನಿರ್ವಹಿಸಿ ಕುಟುಂಬದ ಜನಗಣತಿ ಮಾಹಿತಿ ದಾಖಲಿಸಬೇಕು. ಇದರಿಂದ ಸಮಯದ ಉಳಿತಾಯದೊಂದಿಗೆ ನಿಖರ ಮಾಹಿತಿ ದಾಖಲಾಗುತ್ತದೆ ಎಂದು ಜಿಲ್ಲಾ ಪ್ರಧಾನ ಜನಗಣತಿ ಅಧಿಕಾರಿಗಳು ಹಾಗೂ ಜಿಲ್ಲಾದಿಕಾರಿ ಸ್ನೇಹಲ್ ಆರ್. ಹೇಳಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಭಾರತದ 16ನೇ ಜನಗಣತಿ ಅಂಗವಾಗಿ ಸ್ವಯಂ ಗಣತಿ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಏ. 16ರಿಂದ ಮೇ 15ರವರೆಗೆ ಮನೆಪಟ್ಟಿ ಕಾರ್ಯ ಕೆಗೊಳ್ಳಲಾಗುವುದು. ಡಿಜಿಟಲ್ ಮೋಡ್ನಲ್ಲಿ ನಡೆಯುವ ಪ್ರಥಮ ಜನಗಣತಿ ಇದಾಗಿದೆ. ಗಣತಿದಾರರು ಮನೆಗೆ ಭೇಟಿ ನೀಡಿ ಎಸ್ಇ ಐಡಿ ಮೂಲಕ ಮಾಹಿತಿ ದಢೀಕರಿಸುತ್ತಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲ ಚಾರ್ಜ್ ಅಧಿಕಾರಿಗಳಿಗೆ ಮತ್ತು ೇತ್ರ ತರಬೇತುದಾರರಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ 1,363 ಮತ್ತು ನಗರ ಮತ್ತು ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 206 (ಮಹಾನಗರ ಪಾಲಿಕೆ ಹೊರತುಪಡಿಸಿ) ಜಿಲ್ಲೆಯಲ್ಲಿ 1,569 ಬ್ಲಾಕ್ಗಳನ್ನು ರಚಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 2,047 ಬ್ಲಾಕ್ಗಳನ್ನು ರಚಿಸಲಾಗಿದೆ ಎಂದರು.
ಜಿಲ್ಲಾ ಜನಗಣತಿ ಅಧಿಕಾರಿ ಹಾಗೂ ಅಪರ ಜಿಲ್ಲಾಧಿಕಅರಿ ಗೀತಾ ಸಿ.ಡಿ. ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಇತರರಿದ್ದರು.