ಧಾರವಾಡ: ತಾಲೂಕಿನ ಕಲಕೇರಿ ಗ್ರಾಮದ ಆದೀಶ ಭೀಮಪ್ಪ ಭಾವಕ್ಕನವರ 2026& -27ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ನಡೆದ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯಲ್ಲಿ 300ಕ್ಕೆ 265 ಅಂಕ ಪಡೆದು ಆಯ್ಕೆಯಾಗಿದ್ದಾನೆ. ಈತ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದ ಪ್ರತಿಜ್ಞಾ ಕನ್ನಡ ಪ್ರಾಥಮಿಕ ಶಾಲೆಯ 5ನೇ ತರಗತಿಯಲ್ಲಿ ಓದುತ್ತಿದ್ದಾನೆ. ಸಾಧಕ ವಿದ್ಯಾಥಿರ್ಯನ್ನು ಮುಖ್ಯ ಶಿಕ್ಷಕರು, ಗ್ರಾಮಸ್ಥರು ಅಭಿನಂದಿಸಿದ್ದಾರೆ.