ಹುಬ್ಬಳ್ಳಿ ನಗರದ ಬಿಡನಾಳದಲ್ಲಿ (Seeds) ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿಚಾರಣೆಗೆ ಶಾಸಕ ಪ್ರಸಾದ ಅಬ್ಬಯ್ಯ ಸೋಮವಾರ ಚಾಲನೆ ನೀಡಿದರು. ಮೋಹನ ಅಸುಂಡಿ, ಸಿದ್ದಪ್ಪ ಮಿಸಿ, ಚನ್ನಬಸಪ್ಪ ಅಸುಂಡಿ, ಗುರಸಿದ್ದಪ್ಪ ಕಟಗಿ, ಶಂಕರಣ್ಣ ಅಸುಂಡಿ, ವೀರಭದ್ರಪ್ಪ ಮೇಟಿ, ಇತರರು ಇದ್ದರು.
ಹುಬ್ಬಳ್ಳಿ: ರೈತರಿಗೆ ಸಮರ್ಪಕವಾಗಿ ಬೀಜ (Seeds) ಮತ್ತು ಗೊಬ್ಬರ ಪೂರೈಕೆ ಮಾಡಬೇಕು. ಕಾಳ ಸಂತೆಯಲ್ಲಿ ಮಾರಾಟ ಮಾಡುವವರ ಮೇಲೆ ಮುಲಾಜಿಲ್ಲದೆ ಕೃಷಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಲಂ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಬಿಡನಾಳದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು ಕೃತಕ ಅಭಾವ ಸೃಷ್ಟಿಸುವುದು, ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ನಕಲಿ ಬೀಜ ಗೊಬ್ಬರ ವಿತರಣೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ರೈತರು ದೇಶದ ಬೆನ್ನೆಲುಬು. ಅವರು ನಮಗೆ ಅನ್ನ ನೀಡುವ ಅನ್ನದಾತರು. ಅವರಿಗೆ ಯಾವುದೇ ತೊಂದರೆ ಆಗದಂತೆ ಬೀಜ ವಿತರಣೆ ಮಾಡಬೇಕು. ರೈತರು ಕೂಡ ಕಳಪೆ ಬೀಜದ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮಾಜಿ ಉಪಾಧ್ಯಕ್ಷ ಮೋಹನ ಅಸುಂಡಿ, ಸಿದ್ದಪ್ಪ ಮಿಸಿ, ಚನ್ನಬಸಪ್ಪ ಅಸುಂಡಿ, ಗುರಸಿದ್ದಪ್ಪ ಕಟಗಿ, ಶಂಕರಣ್ಣ ಅಸುಂಡಿ, ಅಡಿವೆಪ್ಪ ನಂದಿಹಳ್ಳಿ, ಫಕೀರ್ಗೌಡ್ರು ಕಲ್ಲನ್ನವರ, ವೀರಭದ್ರಪ್ಪ ಮೇಟಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ರೈತರು ಉಪಸ್ಥಿತರಿದ್ದರು.