science model ಹುಬ್ಬಳ್ಳಿಯ ಐಬಿಎಂಆರ್​ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ವಿಜ್ಞಾನ ಮಾದರಿ ತಯಾರಿಕೆ ಕಾರ್ಯಾಗಾರದಲ್ಲಿ ಅಗಸ್ತ್ಯ ಫೌಂಡೇಷನ್ ಸಂಯೋಜಕ ಅಶೋಕ ಗುಜಮಾಗಡಿ, ಪ್ರಾಚಾರ್ಯ ಡಾ. ಶಂಕರ ಚಕ್ರವರ್ತಿ, ಪ್ರಕಾಶ ಇಳಕಲ್ಲ, ಜೆ.ಕೆ. ಇಳಿಗೇರ, ಪ್ರವಿಣ, ಆಯಿಷಾ, ಶಾರದಾ ಡಂಬಳ ಇತರರು ಪಾಲ್ಗೊಂಡಿದ್ದರು. 
ಧಾರವಾಡ

science model ವಿಜ್ಞಾನ ಕಲಿಕೆಗೆ ಮಾದರಿಗಳು ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ವಿಜ್ಞಾನ ಮಾದರಿ ತಯಾರಿಕೆ ಕಾರ್ಯಾಗಾರ
  • ಐಬಿಎಂಆರ್​ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜನೆ
ಹುಬ್ಬಳ್ಳಿ: science model ಇಲ್ಲಿಯ ಐಬಿಎಂಆರ್​ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಗಸ್ತ್ಯ ಫೌಂಡೇಷನ್​ ಸಹಯೋಗದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಕೆ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿತ್ತು.
ನ್ಯೂಟನ್​ನ ಚಲನೆಯ ನಿಯಮ, ಬೆಳಕಿನ ಪ್ರತಿಫಲನ, ವೇಗ ಮುಂತಾದ ವಿಜ್ಞಾನ ಮಾದರಿಗಳನ್ನು ಹೇಗೆ ತಯಾರಿಸಬಹುದು ಎಂಬುದನ್ನು ಪ್ರಾತ್ಯಕ್ಷಿಕೆ ನೀಡಲಾಯಿತು.
ಅತಿಥಿಯಾಗಿದ್ದ ಅಗಸ್ತ್ಯ ಫೌಂಡೇಷನ್ ಸಂಯೋಜಕ ಅಶೋಕ ಗುಜಮಾಗಡಿ ಮಾತನಾಡಿ, ವಿಜ್ಞಾನ ಮಾದರಿಗಳ ಅವಶ್ಯಕತೆ ಹಾಗೂ ಮಹತ್ವಗಳನ್ನು ವಿವರಿಸಿದರು. ಶಿಕ್ಷಕರು ಮಕ್ಕಳಿಗೆ ಮಾದರಿಗಳ ಮೂಲಕ ವಿವರಿಸಿದರೆ ವಿಜ್ಞಾನ ಬೇಗ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಶಂಕರ ಚಕ್ರವರ್ತಿ, ಶಿಕ್ಷಕರು ವಿಜ್ಞಾನ ವಿಷಯ ಪಾಠ ಮಾಡುವಾಗ ಮಾದರಿಗಳನ್ನು ಬಳಸಬೇಕು. ಇದರಿಂದ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಮೂಡುತ್ತದೆ. ಅಲ್ಲದೇ ಸಂಶೋಧನೆಗಳಿಗೆ ಸ್ಪೂರ್ತಿ ನೀಡುತ್ತದೆ. ಪ್ರಶಿಕ್ಷಣಾರ್ಥಿಗಳು ಮುಂದೆ ತಾವು ಶಿಕ್ಷಕರಾದ ನಂತರ ಇಂತಹ ಚಟುವಟಿಕೆಗಳನ್ನು ಹೆಚ್ಚು ಕೈಗೊಳ್ಳಬೇಕು. ಇದರಿಂದ ಬೋಧನೆ ಪರಿಣಾಮಕಾರಿಯಾಗಲಿದೆ ಎಂದು ಸಲಹೆ ನೀಡಿದರು.